ದೇಶದ ಕೋಟ್ಯಂತರ ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳಿಗೆ ಈಗ ಹ್ಯಾಕ್ ಆತಂಕ ಎದುರಾಗಿದೆ. ಮೊಬೈಲ್ ಬಳಕೆದಾರರಿಗೆ ಗೊತ್ತಾಗದ ಹಾಗೆ ಸೂಕ್ಷ್ಮ ಮಾಹಿತಿಗಳಿಗೆ ಕನ್ನ ಹಾಕುವ ಹಾಗೂ ಅವರ ಮೊಬೈಲ್‌ಗಳಿಗೆ ದುರುದ್ದೇಶದ ಕೋಡ್ ಅನ್ನು ತೂರಿಸುವ ಸಾಧ್ಯತೆ ಕುರಿತು ಸರ್ಟ್-ಇನ್ ಎಚ್ಚರಿಕೆ ನೀಡಿದೆ.
ನವದೆಹಲಿ: ದೇಶದ ಕೋಟ್ಯಂತರ ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳಿಗೆ ಈಗ ಹ್ಯಾಕ್ ಆತಂಕ ಎದುರಾಗಿದೆ. ಮೊಬೈಲ್ ಬಳಕೆದಾರರಿಗೆ ಗೊತ್ತಾಗದ ಹಾಗೆ ಸೂಕ್ಷ್ಮ ಮಾಹಿತಿಗಳಿಗೆ ಕನ್ನ ಹಾಕುವ ಹಾಗೂ ಅವರ ಮೊಬೈಲ್‌ಗಳಿಗೆ ದುರುದ್ದೇಶದ ಕೋಡ್ ಅನ್ನು ತೂರಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರದ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸರ್ಟ್-ಇನ್) ಎಚ್ಚರಿಕೆ ನೀಡಿದೆ.
ಈ ಮಾಹಿತಿ ಲಭಿಸುತ್ತಿದ್ದಂತೆ ಮೊಬೈಲ್ ಕಂಪನಿಗಳಾದ ಸ್ಯಾಮ್‌ಸಂಗ್, ರಿಯಲ್‌ಮಿ, ಒನ್‌ಪ್ಲಸ್, ಶಿಯೋಮಿ ಹಾಗೂ ವಿವೋಗಳಿಗೂ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಹೀಗಾಗಿ ಆ ಕಂಪನಿಗಳು ಹ್ಯಾಕಿಂಗ್ ತಡೆಯಲು ಸೆಕ್ಯುರಿಟಿ ಪ್ಯಾಚ್‌ಗಳ ಬಿಡುಗಡೆ ಆರಂಭಿಸಿವೆ. ಈಗಾಗಲೇ ಕೆಲವು ಮೊಬೈಲ್‌ಗಳಿಗೆ ಈ ಪ್ಯಾಚ್‌ಗಳು ಬರುತ್ತಿದ್ದು, ಮುಂಬರುವ ವಾರಗಳಲ್ಲಿ ಉಳಿದ ಮೊಬೈಲ್ ಫೋನ್‌ಗಳಿಗೂ ಬರಲಿವೆ. ಸೆಕ್ಯುರಿಟಿ ಪ್ಯಾಚ್‌ಗಾಗಿ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಸೆಟ್ಟಿಂಗ್ಸ್ ಹೋಗಿ, ಸಿಸ್ಟಮ್ ಅಪ್‌ಡೇಟ್ ಕ್ಲಿಕ್ ಮಾಡಿ, ಸಾಫ್ಟ್‌ವೇರ್ ಮೇಲೆ ಒತ್ತುವ ಮೂಲಕ ಭದ್ರತಾ ಪ್ಯಾಚ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.ಅಲ್ಲಿವರೆಗೂ ಅಪಾಯಕಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದು ಅಥವಾ ಗೊತ್ತಿಲ್ಲದವರಿಂದ ಬರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ಮಾಡಬಾರದು ಎಂದು ಸೈಬರ್ ತಂತ್ರಜ್ಞರು ಸಲಹೆ ಮಾಡಿದ್ದಾರೆ.
ಈ ಆವೃತ್ತಿಗಳ ಆ್ಯಂಡ್ರಾಯ್ಡ್ ಫೋನ್‌ಗಳು ದೇಶದಲ್ಲಿ ಕಮ್ಮಿ ಎಂದರೂ 1 ಕೋಟಿಗೂ ಅಧಿಕ ಸಂಖ್ಯೆಯಲ್ಲಿವೆ.