ಇಂದು ನಭಕ್ಕೆ ಚೆನ್ನೈ ಮೂಲದ ಸ್ಟಾರ್ಟಪ್‌ ‘ಸ್ಪೇಸ್ ಜೋನ್’ ಸಿದ್ಧಪಡಿಸಿರುವ ದೇಶದ ಮೊದಲ ಮರು ಬಳಕೆ ಹೈಬ್ರಿಡ್‌ ರಾಕೆಟ್‌

KannadaprabhaNewsNetwork |  
Published : Aug 24, 2024, 01:29 AM ISTUpdated : Aug 24, 2024, 11:36 AM IST
ಮಿಷನ್ ರೂಮಿ | Kannada Prabha

ಸಾರಾಂಶ

ಚೆನ್ನೈ ಮೂಲದ ಸ್ಟಾರ್ಟಪ್‌ ‘ಸ್ಪೇಸ್ ಜೋನ್’ ಸಿದ್ಧಪಡಿಸಿರುವ ದೇಶದ ಮೊದಲ ಮರುಬಳಕೆಯ ಹೈಬ್ರಿಡ್‌ ರಾಕೆಟ್ ‘ಮಿಷನ್ ರೂಮಿ - 2024’ ಶನಿವಾರ ನಭಕ್ಕೆ ಉಡಾವಣೆ ಆಗಲಿದೆ.

ಚೆನ್ನೈ: ಚೆನ್ನೈ ಮೂಲದ ಸ್ಟಾರ್ಟಪ್‌ ‘ಸ್ಪೇಸ್ ಜೋನ್’ ಸಿದ್ಧಪಡಿಸಿರುವ ದೇಶದ ಮೊದಲ ಮರುಬಳಕೆಯ ಹೈಬ್ರಿಡ್‌ ರಾಕೆಟ್ ‘ಮಿಷನ್ ರೂಮಿ - 2024’ ಶನಿವಾರ ನಭಕ್ಕೆ ಉಡಾವಣೆ ಆಗಲಿದೆ.

ಮೂನ್‌ಮ್ಯಾನ್‌ ಖ್ಯಾತಿಯ ಇಸ್ರೋದ ಮಾಜಿ ನಿರ್ದೇಶಕ ಎಂ. ಅಣ್ಣಾದೊರೈ ಮಾರ್ಗದರ್ಶನದಲ್ಲಿ ಈ ರಾಕೆಟ್‌ ಸಿದ್ಧಗೊಂಡಿದ್ದು, ಬೆಳಿಗ್ಗೆ 7 ಗಂಟೆಗೆ ತಿರುವಿದಂದೈನಿಂದ ಉಡಾವಣೆ ಆಗಲಿದೆ. ಮರುಬಳಕೆ ಹೈಬ್ರಿಡ್‌ ರಾಕೆಟ್‌ ತನ್ನೊಂದಿಗೆ 53 ಸಣ್ಣ ಉಪಗ್ರಹಗಳನ್ನು ನಭಕ್ಕೆ ಕೊಂಡೊಯ್ಯಲಿದೆ.

ವಿಶೇಷತೆ ಏನು?: 3.5 ಮೀಟರ್‌ ಉದ್ದ 80 ಕೆಜಿ ತೂಕದ ಈ ರಾಕೆಟ್‌ನ ಶೇ.70ರಷ್ಟು ಮರುಬಳಕೆ ಮಾಡಬಹುದು. ಅಂದರೆ ರಾಕೆಟ್‌ನ ಮುಖ್ಯಭಾಗ, ಉಪಗ್ರಹಗಳನ್ನು ಹೊಂದಿರುವ ರಾಕೆಟ್‌ನ ಮೂಗಿನ ಭಾಗ, ಯಶಸ್ವಿ ಉಡ್ಡಯನದ ಬಳಿಕ ಮರಳಿ ಭೂಮಿ ವಾತಾವರಣ ಪ್ರವೇಶಿಸಿ ಸಮುದ್ರದಲ್ಲಿ ಬೀಳಲಿದೆ. ಅಲ್ಲಿಂದ ಈ ಭಾಗಗಳನ್ನು ಮರಳಿ ಸಂಗ್ರಹಿಸಿ, ಇನ್ನೊಂದು ಉಡ್ಡಯನಕ್ಕೆ ಬಳಸಬಹುದು. ಇದು ಭವಿಷ್ಯದ ಉಡ್ಡಯನ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.

ರೂಮಿ 1 ರಾಕೆಟ್‌ 35 ಕಿ.ಮೀ ಎತ್ತರದ ಕಕ್ಷೆವರೆಗೆ ಹಾರಬಲ್ಲದು. ರೂಮಿ 2 ರಾಕೆಟ್‌ ಅನ್ನು 250 ಕೆಜಿ ಭಾರ ಹೊತ್ತು 250 ಕಿ.ಮೀ ಎತ್ತರಕ್ಕೆ ಸಾಗಬಲ್ಲ ರೀತಿ ಕಂಪನಿ ಅಭಿವೃದ್ಧಿಪಡಿಸುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದಾಖಲೆ ಏರಿಕೆ ಬಳಿಕ ತೈಲ ಬೆಲೆ 88 ಡಾಲರ್‌ಗೆ ಇಳಿಕೆ
ಚೆನ್ನೈನ ಅಮೆರಿಕ ಕಾನ್ಸಲ್ ಜನರಲ್ ಆಗಿ ಮರಿಯಾನಾ ಅಧಿಕಾರ ಸ್ವೀಕಾರ