ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ದೆಹಲಿಯಲ್ಲಿ ‘ಭಾರತ್ ಪೋಲ್’ ಪೋರ್ಟಲ್ ಗೆ ಚಾಲನೆ ನೀಡದರು. ಸಿಬಿಐ ಈ ಹೋಸ ವೆಬ್‌ಸೈಟ್ ಆರಂಭಿಸಿದ್ದು ಭಾರತದಾದ್ಯಂತ ಇರುವ ತನಿಖಾ ಸಂಸ್ಥೆಗಳಿಗೆ ವೇಗವಾದ ಅಂತರಾಷ್ಟ್ರೀಯ ಪೊಲೀಸ್ ಸಹಾಯಕ್ಕಾಗಿ ನೈಜ-ಸಮಯದ ಮಾಹಿತಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.ಈ ವೇಳೆ ಅವರು ಮಾತನಾಡಿ, ‘ವಿದೇಶದಲ್ಲಿ ಅವಿತಿರುವ ಕೇಡಿಗಳನ್ನು ಭಾರತಕ್ಕೆ ತರಲು ಇದರಿಂದ ನೈಜ ಸಮಯದಲ್ಲಿ ಅವಕಾಶ ಸಿಗಲಿದೆ’ ಎಂದರು.
ಕೂಡಲೇ ಈ ಪೋರ್ಟಲ್ ನಿರ್ವಹಿಸುವ ಸಿಬಿಐ, ಆತ ಭಾರತಕ್ಕೆ ಬೇಕಾಗಿದ್ದಾನೆ ಎಂಬ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಾದ ಇಂಟರ್‌ಪೋಲ್‌ಗೆ ರವಾನಿಸುತ್ತಾರೆ ಹಾಗೂ ಆತನ ಬಂಧನಕ್ಕೆ ಸಹಕಾರ ಕೋರುತ್ತಾರೆ. ಬಳಿಕ ಇಂಟರ್‌ಪೋಲ್, ಆ ಕೇಡಿಯ ಬಂಧನಕ್ಕೆ ನೋಟಿಸ್ ಹೊರಡಿಸುತ್ತದೆ.
ಈವರೆಗೂ ಬೇಕಿರುವ ಆರೋಪಿಗಳ ಬಗ್ಗೆ ಮಾಹಿತಿಯನ್ನು ಆಯಾ ರಾಜ್ಯಗಳ ಪೊಲೀಸರು ಪತ್ರ ಮುಖೇನ ಸಿಬಿಐಗೆ ತಿಳಿಸುತ್ತಿದ್ದರು. ಇದು ವಿಳಂಬ ಪ್ರಕ್ರಿಯೆ ಆಗಿತ್ತು.