ಜ.21ರಂದೇ ಅಯೋಧ್ಯೆಗೆ: 22ಕ್ಕೆ ಪ್ರತಿಷ್ಠಾಪನೆಯಲ್ಲಿ ಭಾಗಿ

KannadaprabhaNewsNetwork |  
Published : Jan 18, 2024, 02:00 AM ISTUpdated : Jan 18, 2024, 01:59 PM IST
Prime Minister Narendra Modi

ಸಾರಾಂಶ

ಜ.22ರ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಸರಯೂ ನದಿಯಲ್ಲಿ ಪ್ರಧಾನಿ ಮೋದಿ ಸ್ನಾನ ಮಾಡಲಿದ್ದು, ಕಳಸದಲ್ಲಿ ನದಿ ನೀರನ್ನು ಗರ್ಭಗುಡಿಗೆ ಒಯ್ದು, ಕಾರ್ಯಕ್ರಮದ ನೇಪಥ್ಯ ವಹಿಸಲಿದ್ದಾರೆ.

ಅಯೊಧ್ಯೆ: ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ನಡೆಸಿಕೊಡಲಿರುವ ಪ್ರಧಾನಿ ನರೇಂದ್ರ ಮೋದಿ, ಜ.21ರಂದೇ ಅಯೋಧ್ಯೆಗೆ ಆಗಮಿಸಲಿದ್ದಾರೆ.

ಈ ಮೊದಲು ಜ.22ರ ಮುಂಜಾನೆ 11 ಗಂಟೆ ವೇಳೆ ಮೋದಿ ಅಯೋಧ್ಯೆಗೆ ಆಗಮಿಸುವ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿತ್ತು. ಆದರೆ ಉತ್ತರ ಭಾರತದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ವಿಮಾನ ವಿಳಂಬ ಆಗಬಹುದಾಗಿದೆ. ಹೀಗಾಗಿ 1 ದಿನ ಮುಂಚಿತವಾಗಿಯೇ ಮೋದಿ ಆಗಮಿಸಲಿದ್ದು, ಜ.21ರಂದು ಅಯೋಧ್ಯೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜ.22ಕ್ಕೆ ಮೋದಿಯಿಂದ ಪ್ರಾಣಪ್ರತಿಷ್ಠಾಪನೆ: ಇನ್ನು ಜ.21ರಂದು ಅಯೋಧ್ಯೆಗೆ ಆಗಮಿಸುವ ಮೋದಿ, ಜ.22ರಂದು ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿರುವ ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. 

ಇದಾದ ಬಳಿಕ ಮೋದಿ, ಕಳಸದಲ್ಲಿ ಸರಯೂ ನದಿ ನೀರು ತೆಗೆದುಕೊಂಡು, ಮಂದಿರದ ಗರ್ಭಗುಡಿಗೆ ಹೋಗಲಿದ್ದಾರೆ. ಬಳಿಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಮುಖ್ಯ ಯಜಮಾನರಾಗಿ ಕಾರ್ಯಕ್ರಮ ನೆರವೇರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿಂದೂರದ ವೇಳೆ ಅಡಗಲು ಸೂಚನೆ ಇತ್ತು: ಜರ್ದಾರಿ
2025 ಸಾರ್ಥಕ ವರ್ಷ: ಮನ್‌ ಕಿ ಬಾತ್‌ನಲ್ಲಿ ಮೋದಿ