ಭಾನುವಾರದಿಂದ 2 ದಿನಗಳ ಸ್ವೀಡನ್ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವೀಡನ್ ಸರ್ಕಾರದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
- ಇದು ಪ್ರಧಾನಿಗೆ 31ನೇ ಜಾಗತಿಕ ಗೌರವಸ್ಟಾಕ್‌ಹೋಂ: ಭಾನುವಾರದಿಂದ 2 ದಿನಗಳ ಸ್ವೀಡನ್ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವೀಡನ್ ಸರ್ಕಾರದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
‘ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಕಮಾಂಡರ್ ಗ್ರ್ಯಾಂಡ್ ಕ್ರಾಸ್’ ಹೆಸರಿನ ಪ್ರಶಸ್ತಿಯೇ ಮೋದಿ ಅವರ ಮುಡಿಗೇರಿದ ಗೌರವ. ಇದು ಸರ್ಕಾರವೊಂದರ ಮುಖ್ಯಸ್ಥರಿಗೆ ಸ್ವೀಡನ್ ಸರ್ಕಾರ ನೀಡುವ ಅತ್ಯುನ್ನತ ಮನ್ನಣೆ ಮತ್ತು ಗೌರವವಾಗಿದೆ. ಅಲ್ಲದೆ, ಇದು ಪ್ರಧಾನಿ ಮೋದಿಯವರಿಗೆ 31ನೇ ಜಾಗತಿಕ ಗೌರವವಾಗಿದೆ.
ಸ್ವೀಡನ್ ಪ್ರಧಾನಿ ಜತೆ ಮಾತುಕತೆ:
ಈ ನಡುವೆ, ಪ್ರಧಾನಿ ಮೋದಿ ಭಾನುವಾರ ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.