ಸ್ವಾತಂತ್ರ್ಯ ಯೋಧರ ಪಟ್ಟೀಲಿ ಮೋದಿ ಹೆಸರು!

KannadaprabhaNewsNetwork |  
Published : Sep 08, 2026, 02:00 AM IST
Narendra Modi

ಸಾರಾಂಶ

ಸ್ಪರ್ಧಾ ಪರೀಕ್ಷಾ ಮಾರ್ಗದರ್ಶಿ ಪುಸ್ತಕವೊಂದರ ‘ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಪಾಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕಾಣಿಸಿಕೊಂಡಿದೆ. ಇದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ನವದೆಹಲಿ: ಸ್ಪರ್ಧಾ ಪರೀಕ್ಷಾ ಮಾರ್ಗದರ್ಶಿ ಪುಸ್ತಕವೊಂದರ ‘ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಪಾಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕಾಣಿಸಿಕೊಂಡಿದೆ. ಇದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸ್ವಾತಂತ್ರ್ಯ ಸಿಕ್ಕಿದ್ದು 1947ರಲ್ಲಿ-ಮೋದಿ ಜನಿಸಿದ್ದು 1950ರಲ್ಲಿ

‘ಸ್ವಾತಂತ್ರ್ಯ ಸಿಕ್ಕಿದ್ದು 1947ರಲ್ಲಿ. ಮೋದಿ ಜನಿಸಿದ್ದು 1950ರಲ್ಲಿ. ಅವರು ಹೇಗೆ ಸ್ವಾತಂತ್ರ್ಯ ಯೋಧರು ಆದರು?’ ಎಂದು ಹಲವರು ಪ್ರಶ್ನಿಸಿದ್ದಾರೆ.

‘ಸ್ವಾತಂತ್ರ್ಯ ಹೋರಾಟಗಾರರ ನುಡಿಗಳು ಮತ್ತು ಘೋಷವಾಕ್ಯಗಳು’

ಪುಸ್ತಕದಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ ನುಡಿಗಳು ಮತ್ತು ಘೋಷವಾಕ್ಯಗಳು’ ಹೆಸರಿನ 56ನೇ ಪಾಠವಿದೆ. ಇದರಲ್ಲಿ ಮೋದಿ ಅವರ ಹೆಸರನ್ನು ಬರೆಯಲಾಗಿದೆ. ಮೋದಿ ಅವರ ಘೋಷವಾಕ್ಯ ಕಾಲಂನಲ್ಲಿ ಅವರ ಜನಪ್ರಿಯ ಘೋಷಣೆಗಳಾದ ‘ನಾನೂ ಚೌಕಿದಾರ. ಜೈ ಜವಾನ್‌ ಜೈ ಕಿಸಾನ್‌ ಜೈ ವಿಜ್ಞಾನ್‌ ಜೈ ಅನುಸಂಧಾನ್‌’ ಎಂದು ಬರೆಯಲಾಗಿದೆ. ಪಾಠ ಬರೆದವರು ಶಿವಂತ್‌ ಸರ್‌ ಎಂದೂ ಬರೆಯಲಾಗಿದೆ. ಈ ವಿಡಿಯೋ ವೈರಲ್‌ ಆಗಿದ್ದು, ಜನ ತರಹೇವಾರಿ ಕಾಮೆಂಟ್‌ ಮಾಡಿ ಟೀಕಿಸುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪೋರ್ನೋಗ್ರಫಿಗೆ ಸಕ್ರಮಕ್ಕೆ ಉಕ್ರೇನ್‌ ಚಿಂತನೆ
ಜೈಲಲ್ಲಿದ್ರೂ ಮರಾಠಿ ಬರಲಿಲ್ಲ : ಸಂಜಯ ದತ್ ಹೇಳಿಕೆ ವಿವಾದ