ಮುಂಗಾರು ಮಳೆ ಶೇ.42 ಕೊರತೆ: ದೇಶಾದ್ಯಂತ ಇನ್ನು ಚೇತರಿಕೆ ಕಷ್ಟ!

Published : Jun 19, 2026, 09:26 AM IST
Rain

ಸಾರಾಂಶ

ದೇಶಕ್ಕೆ ಮುಂಗಾರು ಪ್ರವೇಶಿಸಿ ಎರಡು ವಾರಗಳು ಕಳೆದರೂ ಮಳೆ ಮಾತ್ರ ಜನರ ಜತೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಮುಂಗಾರು ಕೊರತೆ ಪ್ರಮಾಣ ಈಗ ಶೇ.42ಕ್ಕೇರಿದೆ. ಇನ್ನು ಇದು ಚೇತರಿಸಿಕೊಂಡು ವಾಡಿಕೆಯಂತೆ ಮಳೆ ಬೀಳುವುದು ಕಷ್ಟ ಎಂದು ಹವಾಮಾನ ಇಲಾಖೆ ಹೇಳಿದೆ.

 ನವದೆಹಲಿ: ದೇಶಕ್ಕೆ ಮುಂಗಾರು ಪ್ರವೇಶಿಸಿ ಎರಡು ವಾರಗಳು ಕಳೆದರೂ ಮಳೆ ಮಾತ್ರ ಜನರ ಜತೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಮುಂಗಾರು ಕೊರತೆ ಪ್ರಮಾಣ ಈಗ ಶೇ.42ಕ್ಕೇರಿದೆ. ಇನ್ನು ಇದು ಚೇತರಿಸಿಕೊಂಡು ವಾಡಿಕೆಯಂತೆ ಮಳೆ ಬೀಳುವುದು ಕಷ್ಟ ಎಂದು ಹವಾಮಾನ ಇಲಾಖೆ ಹೇಳಿದೆ.

ಜೂ.4ರಂದು ದೇಶಕ್ಕೆ ಮುಂಗಾರು ಪ್ರವೇಶ

ಜೂ.4ರಂದು ದೇಶಕ್ಕೆ ಮುಂಗಾರು ಪ್ರವೇಶಿಸಿದ್ದು, ಜೂ.18ರವರೆಗೆ ವಾಡಿಕೆ ಪ್ರಕಾರ 72.2 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಸದ್ಯ ಕೇವಲ 42.6 ಮಿ.ಮೀ ಮಾತ್ರ ಮಳೆಯಾಗಿದೆ.

ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಗಳಲ್ಲಿ ಒತ್ತಡ ಸೃಷ್ಟಿಯಾಗದೇ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಾನ್ಸೂನ್ ದಕ್ಷಿಣ ಮಹಾರಾಷ್ಟ್ರದಲ್ಲಿ ಸ್ಥಗಿತಗೊಂಡಿದ್ದು ಮುಂದೆ ಚಲಿಸುತ್ತಲೇ ಇಲ್ಲ. ಮುಂದಿನ ದಿನಗಳಲ್ಲಿ ಇದು ಚೇತರಿಸಿಕೊಂಡು, ವಾಡಿಕೆಯಷ್ಟು ಮಳೆಯಾಗುವ ಸಾಧ್ಯತೆ ಕಮ್ಮಿ ಎಂದು ಅದು ಆತಂಕ ವ್ಯಕ್ತಪಡಿಸಿದೆ.

ಪ್ರದೇಶವಾರು ಕೊರತೆ:

ಮಧ್ಯ ಭಾರತದಲ್ಲಿ ಶೇ.67, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.42, ದಕ್ಷಿಣ ಪರ್ಯಾಯ ದ್ವೀಪ ಭಾಗದಲ್ಲಿ ಶೇ.22 ಹಾಗೂ ಮತ್ತು ವಾಯವ್ಯ ಭಾರತದಲ್ಲಿ ಶೇ.6ರಷ್ಟು ಮಳೆ ಕೊರತೆ ಇದೆ.

ಈ ಹಿಂದೆಯೇ ಎಲ್‌ ನಿನೋ ಪ್ರಭಾವದಿಂದ ಈ ವರ್ಷ ವಾಡಿಕೆಯ ಶೇ.90ರಷ್ಟು ಮಾತ್ರ ಮಳೆ ಆಗಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುಎಇನಲ್ಲೂ 15 ವರ್ಷ ಒಳಗಿನ ಮಕ್ಕಳಿಗೆ ಜಾಲತಾಣ ಬಳಕೆ ನಿರ್ಬಂಧ
ಅಯೋಧ್ಯೆ ರಾಮಮಂದಿರ ಸಿಸಿಟೀವಿ ತಿರುಚಲು ಯತ್ನ: ಎಸ್‌ಐಟಿ ತನಿಖೆಯಿಂದ ಪತ್ತೆ