ಶೇ.8ರಷ್ಟು ಅಧಿಕ ಮಳೆ ಸುರಿಸಿದ ಮುಂಗಾರು ಸಂಪೂರ್ಣ ಹಿಂಪಡೆತ

Published : Oct 17, 2025, 06:16 AM IST
Rajasthan Monsoon Alert

ಸಾರಾಂಶ

5 ತಿಂಗಳ ಕಾಲ ದೇಶಾದ್ಯಂತ ಉತ್ತಮ ಮಳೆ ಸುರಿಸಿದ ಮುಂಗಾರು ಮಾರುತಗಳು ಅ.16ರಂದು ಪೂರ್ಣ ಪ್ರಮಾಣದಲ್ಲಿ ನಿರ್ಗಮನಗೊಂಡಿವೆ. ಈ ಬಾರಿ ಅವಧಿಗಿಂತ ಮೊದಲೇ, ಮೇ 24ಕ್ಕೆ ಕೇರಳ ಕರಾವಳಿ ಪ್ರವೇಶಿಸಿದ್ದ ಮಾರುತಗಳ 5 ತಿಂಗಳ ಅವಧಿಯಲ್ಲಿ ಒಟ್ಟು 937 ಮಿ.ಮೀ ಮಳೆ ಸುರಿಸಿವೆ.

ನವದೆಹಲಿ: 5 ತಿಂಗಳ ಕಾಲ ದೇಶಾದ್ಯಂತ ಉತ್ತಮ ಮಳೆ ಸುರಿಸಿದ ಮುಂಗಾರು ಮಾರುತಗಳು ಅ.16ರಂದು ಪೂರ್ಣ ಪ್ರಮಾಣದಲ್ಲಿ ನಿರ್ಗಮನಗೊಂಡಿವೆ. ಈ ಬಾರಿ ಅವಧಿಗಿಂತ ಮೊದಲೇ, ಮೇ 24ಕ್ಕೆ ಕೇರಳ ಕರಾವಳಿ ಪ್ರವೇಶಿಸಿದ್ದ ಮಾರುತಗಳ 5 ತಿಂಗಳ ಅವಧಿಯಲ್ಲಿ ಒಟ್ಟು 937 ಮಿ.ಮೀ ಮಳೆ ಸುರಿಸಿವೆ.

 ಇದು ದೀರ್ಘಕಾಲೀನ ಸರಾಸರಿಯಾದ 868 ಮಿ.ಮೀಗಿಂತ ಶೇ.8ರಷ್ಟು ಹೆಚ್ಚು. ಈ ಅವಧಿಯಲ್ಲಿ ಕಾಶ್ಮೀರ, ಪಂಜಾಬ್‌, ಹಿಮಾಚಲ, ಉತ್ತರಾಖಂಡ ಭಾರೀ ಮೇಘಸ್ಫೋಟ, ಪ್ರವಾಹಕ್ಕೆ ತುತ್ತಾಗಿದ್ದವು. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಸುರಿದಿದೆ.

 

PREV
Read more Articles on

Recommended Stories

ಗುಜರಾತ್‌ ಸಂಪುಟ ಪುನಾರಚನೆ : 26 ಸಚಿವರಿಗೆ ಸ್ಥಾನ
ಶಬರಿಮಲೆ ಚಿನ್ನಕ್ಕೆ ಕನ್ನ: ಬೆಂಗಳೂರು ಆರೋಪಿ ಬಂಧನ