ಸದಾ ಭೂಕಂಪನದ ಅಪಾಯ ಎದುರಿಸುವ ದೇಶ ಮ್ಯಾನ್ಮಾರಲ್ಲಿ ನಿರಂತರ ಕಂಪನಕ್ಕೆ ಏನು ಕಾರಣ ?

KannadaprabhaNewsNetwork |  
Published : Mar 29, 2025, 12:32 AM ISTUpdated : Mar 29, 2025, 06:16 AM IST
ಮಯನ್ಮಾರ್‌ | Kannada Prabha

ಸಾರಾಂಶ

  ಮ್ಯಾನ್ಯಾರ್‌ನಲ್ಲಿ ಸಗೈಂಗ್‌ ಫಾಲ್ಟ್‌ ಎಂಬ ಭೂರೇಖೆ ಹಾದು ಹೋಗಿರುವುದರಿಂದ ಭೂಕಂಪನದ ಅಪಾಯ ಹೆಚ್ಚು. ಸಗೈಂಗ್ ಎಂಬುದು ಮ್ಯಾನ್ಮಾರ್‌ನ ನಗರ ಆಗಿರುವ ಕಾರಣ ಅದಕ್ಕೆ ಆ ನಗರದ ಹೆಸರನ್ನೇ ಇಡಲಾಗಿದೆ.,

ಯಾಂಗೋನ್‌: ಮ್ಯಾನ್ಮಾರ್‌ ದೇಶವು ಸದಾ ಭೂಕಂಪನದ ಅಪಾಯ ಎದುರಿಸುವ ದೇಶಗಳಲ್ಲೊಂದು. ಭೂಕಂಪನದ ಅಪಾಯಯಾರಿ ದೇಶಗಳ ಭೂಪಟದಲ್ಲಿ ಮ್ಯಾನ್ಮಾರ್‌ ಡೇಂಜರ್‌ ಝೋನ್‌ನಲ್ಲಿದೆ. ಮ್ಯಾನ್ಯಾರ್‌ನಲ್ಲಿ ಸಗೈಂಗ್‌ ಫಾಲ್ಟ್‌ ಎಂಬ ಭೂರೇಖೆ ಹಾದು ಹೋಗಿರುವುದರಿಂದ ಭೂಕಂಪನದ ಅಪಾಯ ಹೆಚ್ಚು. ಸಗೈಂಗ್ ಎಂಬುದು ಮ್ಯಾನ್ಮಾರ್‌ನ ನಗರ ಆಗಿರುವ ಕಾರಣ ಅದಕ್ಕೆ ಆ ನಗರದ ಹೆಸರನ್ನೇ ಇಡಲಾಗಿದೆ.,

‘ಸಾಗೈಂಗ್ ಫಾಲ್ಟ್’ ಎಂಬುದು ಭೂಮಿಯಲ್ಲಿನ ಪ್ರಮುಖ ದೋಷವಾಗಿದ್ದು, ಇದರ ರೇಖೆಯು ಮಧ್ಯ ಮ್ಯಾನ್ಮಾರ್‌ನಿಂದ ಉತ್ತರ ಮ್ಯಾನ್ಮಾರ್‌ವರೆಗೆ ವ್ಯಾಪಿಸಿದೆ. ಈ ದೋಷವು ಭೂಮಿಯ ಭಾರತೀಯ ಮತ್ತು ಯುರೇಷಿಯನ್ ಫಲಕಗಳ ಚಲನೆಯಿಂದ ಉಂಟಾಗುತ್ತದೆ. ಚಲನೆಯ ದರಗಳು ವಾರ್ಷಿಕವಾಗಿ 11 ಮಿಮೀ ಮತ್ತು 18 ಮಿಮೀ ನಡುವೆ ಇರುತ್ತದೆ. ಇದು ಚಲಿಸುವ ವೇಳೆ ಕೆಲವೊಮ್ಮೆ ಭೂಮಿಯ ಅಂತರ್ಯದಲ್ಲಿ ಒತ್ತಡ ಸೃಷ್ಟಿಯಾಗಿ ಭೂಕಂಪವಾಗುತ್ತದೆ.

ಬಂಗಾಳ, ಈಶಾನ್ಯ ಭಾರತದಲ್ಲೂ ಕಂಪನದ ಅನುಭವ

ಕೋಲ್ಕತಾ: ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಪರಿಣಾಮ, ಪ.ಬಂಗಾಳ ರಾಜಧಾನಿ ಕೋಲ್ಕತಾ, ಈಶಾನ್ಯ ಭಾರತದ ನಗರಗಳಾದ ಇಂಫಾಲ್‌ ಮತ್ತು ಮೇಘಾಲಯದ ಪೂರ್ವಾ ಗಾರೋ ಪ್ರದೇಶದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಸುದೈವವಶಾತ್‌ ಕಂಪನದಿಂದ ಯಾವುದೇ ಆಸ್ತಿ ಅಥವಾ ಜೀವಹಾನಿಯಾಗಿಲ್ಲ.ಪುರಾತನ ಬಹುಮಹಡಿ ಕಟ್ಟಡಗಳಿರುವ ಮಣಿಪುರದ ಇಂಫಾಲ್‌ನ ಥಂಗಲ್‌ ಬಜಾರ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಯಾವುದೇ ದುರ್ಘಟನೆ ವರದಿಯಾಗಿಲ್ಲ. ರಾಜ್ಯದ ಉಖ್ರುಲ್‌ ಜಿಲ್ಲೆಯಲ್ಲೂ ಮಧ್ಯಾಹ್ನದ ವೇಳೆ 2.5 ತೀವ್ರತೆಯ ಭೂಕಂಪವಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ