ಅಖಿಲೇಶ್‌ ಪತ್ನಿ ಡಿಂಪಲ್‌ ಬೆತ್ತಲೆಯಾಗಿ ಮಸೀದಿಗೆ : ಇಮಾಮ್‌ ರಶೀದಿ ವಿವಾದ

KannadaprabhaNewsNetwork |  
Published : Jul 29, 2025, 01:01 AM ISTUpdated : Jul 29, 2025, 02:08 AM IST
Dimple Yadav

ಸಾರಾಂಶ

‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ರ ಪತ್ನಿಯೂ ಆಗಿರುವ ಸಂಸದೆ ಡಿಂಪಲ್‌ ಯಾದವ್‌ ಅವರು ಬೆತ್ತಲೆಯಾಗಿ ಮಸೀದಿಗೆ ಹೋಗಿ ಕುಳಿತಿದ್ದರು’ ಎಂದು ಅಖಿಲ ಭಾರತ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ಲಖನೌ: ‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ರ ಪತ್ನಿಯೂ ಆಗಿರುವ ಸಂಸದೆ ಡಿಂಪಲ್‌ ಯಾದವ್‌ ಅವರು ಬೆತ್ತಲೆಯಾಗಿ ಮಸೀದಿಗೆ ಹೋಗಿ ಕುಳಿತಿದ್ದರು’ ಎಂದು ಅಖಿಲ ಭಾರತ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ಹೀಗಾಗಿ ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಜು.26ರಂದು ಮಸೀದಿಗೆ ಹೋಗಿದ್ದ ಡಿಂಪಲ್‌ ಸೀರೆ ಮಾತ್ರ ಉಟ್ಟಿದ್ದರು. ಬುರ್ಖಾ ಧರಿಸಿರಲಿಲ್ಲ. ಇದರಿಂದಾಗಿ ಅವರ ಬೆನ್ನು ಕೊಂಚ ಕಾಣುತ್ತಿತ್ತು. 

ಈ ಬಗ್ಗೆ ಟೀವಿ ಚಾನೆಲ್‌ನಲ್ಲಿ ಮಾತನಾಡಿದ ರಶೀದ್‌, ‘ಮಸೀದಿಯಲ್ಲಿದ್ದ ಇನ್ನೊಬ್ಬ ಸಂಸದೆ ಇಕ್ರಾ ಹಸನ್‌ ಅವರು ತಲೆ ಸೇರಿದಂತೆ ಇಡೀ ಮೈ ಮುಚ್ಚುವಂತೆ ಬಟ್ಟೆ ತೊಟ್ಟಿದ್ದರು. ಆದರೆ ಡಿಂಪಲ್‌ ಬೆತ್ತಲೆಯಾಗಿದ್ದರು’ ಎಂದು ಹೇಳಿದ್ದರು. 

ಹೀಗಾಗಿ ರಶೀದ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 79(ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದಿಂದ ಆಡಿದ ಮಾತು, ಸನ್ನೆ ಅಥವಾ ಕೃತ್ಯ), 196(ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 197(ರಾಷ್ಟ್ರೀಯ ಏಕೀಕರಣಕ್ಕೆ ಹಾನಿಕರವಾದ ಆರೋಪಗಳು, ಪ್ರತಿಪಾದನೆಗಳು), ಐಟಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ