ದೇಶದಲ್ಲಿ ಸಾಮಾಜಿಕ ಅನಿಷ್ಟದಂಥ ಹೊಸ ಸವಾಲುಗಳು ಸೃಷ್ಟಿ : ಮೋದಿ

KannadaprabhaNewsNetwork |  
Published : Oct 24, 2026, 02:00 AM IST
Modi

ಸಾರಾಂಶ

‘ದೇಶದ ಮುಂದೆ ಹೊಸ ಸವಾಲುಗಳಿವೆ. ಹೊಸ ಸಾಮಾಜಿಕ ಅನಿಷ್ಟಗಳು ಹೊರಹೊಮ್ಮಿವೆ. ಇಂದು, ಅವುಗಳನ್ನು ಪರಿಹರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಭಜಕ ಶಕ್ತಿಗಳ ವಿರುದ್ಧ ಸಮಾಜವನ್ನು ಒಗ್ಗೂಡಿಸಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದಾರೆ.

 ನವದೆಹಲಿ : ‘ದೇಶದ ಮುಂದೆ ಹೊಸ ಸವಾಲುಗಳಿವೆ. ಹೊಸ ಸಾಮಾಜಿಕ ಅನಿಷ್ಟಗಳು ಹೊರಹೊಮ್ಮಿವೆ. ಇಂದು, ಅವುಗಳನ್ನು ಪರಿಹರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಭಜಕ ಶಕ್ತಿಗಳ ವಿರುದ್ಧ ಸಮಾಜವನ್ನು ಒಗ್ಗೂಡಿಸಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದಾರೆ.

ದೇಶದಲ್ಲಿ ಹಲವು ಆಂದೋಲನ

ಇತ್ತೀಚೆಗೆ ವಿಪಕ್ಷಗಳು ಹಾಗೂ ಹೊಸ ಸಂಘಟನೆಯಾದ ಜಿರಳೆ ಜನತಾ ಪಕ್ಷ ದೇಶದಲ್ಲಿ ಹಲವು ಆಂದೋಲನಗಳನ್ನು ರೂಪಿಸಿವೆ. ಇದರ ಹಿಂದೆ ವಿದೇಶಿ ಪಿತೂರಿ ಕೂಡ ಇದೆ ಎಂದೂ ಕೆಲವು ವರದಿಗಳು ಹೇಳಿವೆ.

ದೆಹಲಿಯಲ್ಲಿ ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನ

ಅದರ ಬೆನ್ನಲ್ಲೇ ಮೋದಿ ಅವರ ಈ ಹೇಳಿಕೆ ಬಂದಿದೆ. ದೆಹಲಿಯಲ್ಲಿ ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಳೆದ ದಶಕಗಳಲ್ಲಿ, ದೇಶದ ಮುಂದೆ ಹೊಸ ಸವಾಲುಗಳು ಹುಟ್ಟಿಕೊಂಡಿವೆ, ಸಾಮಾಜಿಕ ಅನಿಷ್ಟಗಳು ಉದ್ಭವವಾಗಿವೆ.

ಅವುಗಳನ್ನು ಪರಿಹರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ನಾವು ಸಮಾಜವನ್ನು ಒಗ್ಗೂಡಿಸಬೇಕು. ನಾಗರಿಕರನ್ನು ಸ್ವಾವಲಂಬನೆಯತ್ತ ಜಾಗೃತಗೊಳಿಸಬೇಕು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ ನಾವು ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಬೇಕು. ಈ ಉದ್ದೇಶಗಳಿಗಾಗಿ, ನಾವು ಇನ್ನಷ್ಟು ಕ್ರಿಯಾಶೀಲರಾಗಬೇಕು’ ಎಂದು ಕರೆ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜ.1ರಿಂದ ವಾಟ್ಸಾಪ್‌, ಟೆಲಿಗ್ರಾಂಗೆ ಆ್ಯಕ್ಟಿವ್‌ ಸಿಮ್‌ ಕಡ್ಡಾಯ
ಪ್ರಿಯಾಂಕಾ ಪುತ್ರನ ಚಿತ್ರ ಪ್ರದರ್ಶನಕ್ಕೆ ಕೇರಳಂಗೆ ಆಹ್ವಾನ: ಬಿಜೆಪಿ ಆಕ್ರೋಶ