ಮೇಲ್ವರ್ಗದ ಬಾಲಕಿ ಸ್ನೇಹ ಮಾಡಿದ್ದಕ್ಕೆ ದಲಿತನ ಉಗುರು ಕಿತ್ತು, ಮೊಳೆ ಹೊಡೆದು ಹಿಂಸೆ

KannadaprabhaNewsNetwork |  
Published : Jun 11, 2026, 12:30 AM IST
Dalit

ಸಾರಾಂಶ

ಮೇಲ್ವರ್ಗದ ಬಾಲಕಿಯೊಬ್ಬಳ ಸ್ನೇಹ ಮಾಡಿದ್ದಕ್ಕೆ ದಲಿತ ಸಮುದಾಯಕ್ಕೆ ಸೇರಿದ 18 ವರ್ಷದ ಯುವಕನೊಬ್ಬನಿಗೆ ಚಿತ್ರಹಿಂಸೆ ನೀಡಲಾಗಿದ್ದು, ಆತ ಮೃತಪಟ್ಟಿರುವ ಘಟನೆ ತೆಹ್ರಿ ಗರ್ವಾಲ್‌ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮನೆಯವರ ಹಿಂಸೆಯಿಂದ ಕೇತನ್‌ ಲಾಲ್‌ ಮೃತಪಟ್ಟಿರುವುದಾಗಿ ಅವನ ಕುಟುಂಬ ಆರೋಪಿಸಿದ್ದು, ನ್ಯಾಯಕ್ಕೆ ಆಗ್ರಹಿಸಿದೆ.

 ತೆಹ್ರಿ ಗರ್ವಾಲ್‌: ಮೇಲ್ವರ್ಗದ ಬಾಲಕಿಯೊಬ್ಬಳ ಸ್ನೇಹ ಮಾಡಿದ್ದಕ್ಕೆ ದಲಿತ ಸಮುದಾಯಕ್ಕೆ ಸೇರಿದ 18 ವರ್ಷದ ಯುವಕನೊಬ್ಬನಿಗೆ ಚಿತ್ರಹಿಂಸೆ ನೀಡಲಾಗಿದ್ದು, ಆತ ಮೃತಪಟ್ಟಿರುವ ಘಟನೆ ತೆಹ್ರಿ ಗರ್ವಾಲ್‌ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮನೆಯವರ ಹಿಂಸೆಯಿಂದ ಕೇತನ್‌ ಲಾಲ್‌ ಮೃತಪಟ್ಟಿರುವುದಾಗಿ ಅವನ ಕುಟುಂಬ ಆರೋಪಿಸಿದ್ದು, ನ್ಯಾಯಕ್ಕೆ ಆಗ್ರಹಿಸಿದೆ.

ಆಗಿದ್ದೇನು?:

6 ತಿಂಗಳ ಹಿಂದೆ ಕೇತನ್‌ಗೆ ಅಪ್ರಾಪ್ತೆಯ ಪರಿಚಯವಾಗಿತ್ತು. ಆಕೆ ಭಾನುವಾರ ಕರೆ ಮಾಡಿ ಕರೆದಳೆಂದು ಕೇತನ್‌ ತನ್ನ ಸ್ನೇಹಿತ ದಿವಾಕರ್ ದಿಮ್ರಿ ಜತೆ ಅವಳ ಹಳ್ಳಿಗೆ ಹೋಗಿದ್ದ. ಅಲ್ಲಿ ಬಾಲಕಿಯ ಮನೆಯವರು ಕೇತನ್‌ ಮತ್ತು ದಿವಾಕರ್‌ನನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಕೇತನ್‌ ಮೃತಪಟ್ಟಿದ್ದು, ದಿವಾಕರ್‌ ಚಿಕಿತ್ಸೆ ಪಡೆಯುತ್ತಿದ್ದಾನೆ.

ಜಾಲತಾಣದಲ್ಲಿ ಹರಿದಾಡುತ್ತಿರುವ ಹಲ್ಲೆಯ ವಿಡಿಯೋ

ಜಾಲತಾಣದಲ್ಲಿ ಹರಿದಾಡುತ್ತಿರುವ ಹಲ್ಲೆಯ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿ ಬಾಲಕಿಯ ತಂದೆ ಹಾಗೂ ಅಜ್ಜನನ್ನು ಬಂಧಿಸಿದ್ದಾರೆ.

ಅತ್ತ, ‘ಇಕ್ಕಳದಿಂದ ಮಗನ ಉಗುರು ಕಿತ್ತು, ಪಾದಕ್ಕೆ ಮೊಳೆ ಹೊಡೆದಿದ್ದಾರೆ. ಜನನಾಂಗಗಳಿಗೆ ತೀವ್ರ ಗಾಯ ಮಾಡಿದ್ದಾರೆ’ ಎಂದು ಕೇತನ್‌ ತಂದೆ ದೂರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಜೆಐಗೆ ಸಿಜೆಪಿ ಥ್ಯಾಂಕ್ಸ್!
ಜಿರಳೆಗೆ ಕೊನೆಗೂ ಪ್ರಧಾನ್‌ ಬಲಿ