ನಕ್ಸಲ್‌ ದಾಳಿಯಲ್ಲಿ 3 ಯೋಧರ ಹತ್ಯೆ: 14 ಮಂದಿಗೆ ಗಾಯ

KannadaprabhaNewsNetwork | Updated : Jan 31 2024, 07:47 AM IST

ಸಾರಾಂಶ

ಛತ್ತೀಸ್‌ಗಢದಲ್ಲಿ ಮಾವೋವಾದಿಗಳಿಂದ ನಡೆದ ದಾಳಿಯಲ್ಲಿ 3 ಸಿಆರ್‌ಪಿಎಫ್‌ ಯೋಧರು ಸಾವನ್ನಪ್ಪಿದ್ದಾರೆ. 14 ಮಂದಿರ ಸ್ಥಿತಿ ಗಂಭೀರವಾಗಿದೆ.

ರಾಯ್ಪುರ: ಮಾವೋವಾದಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 3 ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್‌) ಯೋಧರು ದಾರುಣವಾಗಿ ಸಾವನ್ನಪ್ಪಿ, 14 ಮಂದಿ ಗಾಯಗೊಂಡ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ತೇಕಲ್‌ಗುಡೇಂ ಜಿಲ್ಲೆಯಲ್ಲಿ ನಡೆದಿದೆ.

ಗಾಯಗೊಂಡವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿದ ಬಸ್ತರ್‌ ಪ್ರಾಂತ್ಯದ ಐಗಿಪಿ ಸುಂದರ್‌ರಾಜ್‌, ‘ಕೊಬ್ರಾದ 201ನೇ ಬೆಟಾಲಿಯನ್‌ ಮತ್ತು ಸಿಆರ್‌ಪಿಎಫ್‌ನ 150ನೇ ಬೆಟಾಲಿಯನ್‌ ಸದಸ್ಯರು ಕಾಡಿನ ಕ್ಯಾಂಪ್‌ನಲ್ಲಿ ತಂಗಿದ್ದಾಗ ಮಾವೋವಾದಿಗಳು ಮಧ್ಯಾಹ್ನ 1 ಸುಮಾರಿಗೆ ನಡೆಸಿದ ಗುಂಡಿನ ದಾಳಿಗೆ ಮೂವರು ಯೋಧರು ಬಲಿಯಾಗಿದ್ದು, ಹಲವರಿಗೆ ಗಾಯವಾಗಿದೆ. ಗಾಯಗೊಂಡವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ತಿಳಿಸಿದ್ದಾರೆ.

Share this article