ಯುದ್ಧದಲ್ಲಿ ನಮ್ಮನ್ನು ಬೆಂಬಲಿಸಿ : ವಿಶ್ವಕ್ಕೆ ನೆತನ್ಯಾಹು ಮನವಿ

KannadaprabhaNewsNetwork |  
Published : Mar 23, 2026, 02:00 AM IST
 Benjamin Netanyahu

ಸಾರಾಂಶ

‘ಇಡೀ ವಿಶ್ವದ ಒಳಿತಿಗಾಗಿ ನಾವು ಇರಾನ್‌ ವಿರುದ್ಧ ಹೋರಾಡುತ್ತಿದ್ದೇವೆ. ಯುದ್ಧದಲ್ಲಿ ನಮ್ಮನ್ನು ಬೆಂಬಲಿಸಿ’ ಎಂದು ವಿಶ್ವದ ದೇಶಗಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮನವಿ ಮಾಡಿದ್ದಾರೆ.

ಜೆರುಸಲೇಂ: ‘ಇಡೀ ವಿಶ್ವದ ಒಳಿತಿಗಾಗಿ ನಾವು ಇರಾನ್‌ ವಿರುದ್ಧ ಹೋರಾಡುತ್ತಿದ್ದೇವೆ. ಯುದ್ಧದಲ್ಲಿ ನಮ್ಮನ್ನು ಬೆಂಬಲಿಸಿ’ ಎಂದು ವಿಶ್ವದ ದೇಶಗಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮನವಿ ಮಾಡಿದ್ದಾರೆ.

ಇರಾನ್‌ ದಾಳಿಗೆ ಒಳಗಾದ ಅರಾದ್‌ ಪ್ರದೇಶ

ಇರಾನ್‌ ದಾಳಿಗೆ ಒಳಗಾದ ಅರಾದ್‌ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ‘ಶನಿವಾರ ಇರಾನ್‌ 4000 ಕಿ.ಮೀ. ಸಾಗುವ ಕ್ಷಿಪಣಿ ಹಾರಿಸಿದೆ. ಇದು ಅದರ ರಹಸ್ಯ ಶಸ್ತ್ರಾಸ್ತ್ರ ಭಂಡಾರದ ಸಂಕೇತ. ಇರಾನ್‌ನ ಅಪಾಯದ ಬಗ್ಗೆ ಈ ಕ್ಷಿಪಣಿಯೇ ಸಾಕ್ಷಿ. ಇದು ಇಡೀ ವಿಶ್ವಕ್ಕೇ ಮಾರಕ. ಅದಕ್ಕೆಂದೇ ವಿಶ್ವದ ಪರವಾಗಿ ನಾವು ಹೋರಾಡುತ್ತಿದ್ದೇವೆ’ ಎಂದರು.

ಯುರೋಪ್‌ಗೂ ಇರಾನ್‌ ಬೆದರಿಕೆ: ಇಸ್ರೇಲ್‌ ಎಚ್ಚರಿಕೆ

ಟೆಲ್‌ ಅವೀವ್‌: ‘4000 ಕಿ.ಮೀ. ಸಾಗುವ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಅಮೆರಿಕದ ಡಿಯಾಗೋ ಸೇನಾ ನೆಲೆ ಮೇಲೆ ದಾಳಿ ಮಾಡಿದ್ದ ಇರಾನ್‌, ಅಮೆರಿಕ- ಇಸ್ರೇಲ್‌ಗಳ ಮೇಲಷ್ಟೇ ಅಲ್ಲ. ಯುರೋಪ್‌ ರಾಷ್ಟ್ರಗಳ ಮೇಲೆಯೂ ಕಣ್ಣಿಟ್ಟಿದೆ’ ಎಂದು ಇಸ್ರೇಲ್‌ ಎಚ್ಚರಿಸಿದೆ, ಇರಾನ್‌ ಹಿಂದೂ ಮಹಾಸಾಗರದಲ್ಲಿರುವ ಅಮೆರಿಕದ ಸೇನಾ ನೆಲೆ ಡಿಯಾಗೋ ಗಾರ್ಸಿಯಾ ಮೇಲೆ 4000 ಕಿ.ಮೀ ಕ್ಷಿಪಣಿ ಹಾರಿಸಿ ದಾಳಿ ಮಾಡಿದ ಬೆನ್ನಲ್ಲೇ ಇಸ್ರೇಲ್‌ ಸೇನಾ ಮುಖ್ಯಸ್ಥ ಇಯಾಲ್‌ ಜಮೀರ್‌ ಈ ಬಗ್ಗೆ ಮಾತನಾಡಿದ್ದಾರೆ,‘ಇರಾನ್‌ ಇದೇ ಮೊದಲ ಬಾರಿಗೆ ಇಷ್ಟು ದೂರ ಸಾಮರ್ಥ್ಯವಿರುವ ಕ್ಷಿಪಣಿ ಹಾರಿಸಿದೆ. ಇದು ಇಸ್ರೇಲ್‌ ಅನ್ನು ಹೊಡೆಯುವ ಉದ್ದೇಶ ಹೊಂದಿರಲಿಲ್ಲ, ಅವರ ಗುರಿ ಬರ್ಲಿನ್‌, ಪ್ಯಾರಿಸ್‌, ರೋಮ್‌ನಂತಹ ಯುರೋಪಿಯನ್ ರಾಜ್ಯಗಳ ರಾಜಧಾನಿ ತಲುಪುವುದು ಹಾಗೂ ಅಲ್ಲಿಯೂ ಬೆದರಿಕೆ ಹಾಕುವುದು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!