ಮಾಜಿ ಪತ್ನಿ ವಿರುದ್ಧ ಶ್ರೀಕೃಷ್ಣ ಪಾತ್ರಧಾರಿ ನಿತೀಶ್‌ ದೂರು

KannadaprabhaNewsNetwork |  
Published : Feb 16, 2024, 01:45 AM ISTUpdated : Feb 16, 2024, 09:07 AM IST
ನಿತೀಶ್‌ | Kannada Prabha

ಸಾರಾಂಶ

ಮಕ್ಕಳ ಭೇಟಿಯಾಗಲು ಬಿಡದ ಹಿನ್ನೆಲೆ ಐಎಎಸ್‌ ಪತ್ನಿ ವಿರುದ್ಧ ದೂರು ನೀಡಿದ ಮಹಾಭಾರತ ಧಾರಾವಾಹಿ ಕೃಷ್ಣ ಪಾತ್ರಧಾರಿ ನಿತೀಶ್‌ ಆಕ್ರೋಶ ಹೊರಹಾಕಿದ್ದಾರೆ.

ಭೋಪಾಲ್‌: ಮಕ್ಕಳನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ಆರೋಪಿಸಿ ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ನಟಿಸಿದ್ದ ನಟ ನಿತೀಶ್‌ ಭಾರದ್ವಾಜ್‌ ಅವರು ತಮ್ಮ ಮಾಜಿ ಪತ್ನಿ ಹಾಗೂ ಐಎಎಸ್‌ ಅಧಿಕಾರಿ ಸ್ಮಿತಾ ವಿರುದ್ಧ ದೂರು ದಾಖಲಿಸಿದ್ದಾರೆ.

ಸ್ಮಿತಾ ಅವರು ದುರ್ವರ್ತನೆ ತೋರಿನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನಿತೀಶ್‌ ಬುಧವಾರ ಭೋಪಾಲ್‌ನ ಪೊಲೀಸ್ ಆಯುಕ್ತರಿಗೆ ದೂರಿದ್ದಾರೆ,

ನಿತೀಶ್‌ ಆರೋಪವೇನು?
ನಮ್ಮ ಅವಳಿ ಹೆಣ್ಣುಮಕ್ಕಳನ್ನು ಭೇಟಿಯಾಗಲು ಸ್ಮಿತಾ ಅಡ್ಡಿಪಡಿಸುತ್ತಿದ್ದಾರೆ. ಮಕ್ಕಳ ಶಾಲೆ ಬದಲಾಯಿಸುವ ಮೂಲಕ ಅವರು ನನ್ನ ಸಂಪರ್ಕಕ್ಕೆ ಬಾರದಂತೆ ತಡೆಯುತ್ತಿದ್ದಾರೆ. 

ಇದರಿಂದ ನನಗೆ ಮಾನಸಿಕ ಕಿರುಕುಳವಾಗಿದೆ ಎಂದು ಆರೋಪಿಸಿದ್ದಾರೆ. 2009ರಲ್ಲಿ ಮದುವೆಯಾಗಿದ್ದ ಇವರು 2019ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಸದ್ಯ ಸ್ಮಿತಾ ಮಕ್ಕಳೊಂದಿಗೆ ಇಂದೋರ್‌ನಲ್ಲಿ ವಾಸಿಸುತ್ತಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ