ವಾರಾಣಸಿ: ಬಿಹಾರದಲ್ಲಿ ಬುರ್ಖಾ, ಹಿಜಾಬ್ ಧರಿಸಿ ಬಂದವರಿಗೆ ಚಿನ್ನದಂಗಡಿಯಲ್ಲಿ ವ್ಯಾಪಾರದ ಅವಕಾಶ ನಿರಾಕರಿಸಿದ ಬೆನ್ನಲ್ಲೇ, ಉತ್ತರಪ್ರದೇಶದ ದೇಗುಲ ನಗರಿ ವಾರಾಣಸಿ ಮತ್ತು ಝಾನ್ಸಿಯ ವರ್ತಕರೂ ಇದೇ ನಿರ್ಧಾರ ಕೈಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬುರ್ಖಾ, ಮಾಸ್ಕ್, ಹೆಲ್ಮೆಟ್ ಧರಿಸಿ ಅಂಗಡಿಗೆ ಬರುವವರಿಂದ ನಡೆಯುತ್ತಿರುವ ಅಪರಾಧ ಕೃತ್ಯಗಳು ಹೆಚ್ಚಿವೆ. ಇವುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜೊತೆಗೆ ಸಿಬ್ಬಂದಿ ಮತ್ತು ಮಾಲೀಕರ ಹಿತರಕ್ಷಣೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್, ಬುರ್ಖಾ, ಹೆಲ್ಮೆಟ್ ಧರಿಸಿದರೆ ಚಿನ್ನ ಮಾರಾಟ ಮಾಡದಿರಲು ನಿರ್ಧರಿಸಲಾಗಿದೆ ಎಂದು ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.
ಜೊತೆಗೆ ಇಂಥ ನಿರ್ಧಾರ ಏಕೆ ಎಂಬ ಕಾರಣವನ್ನು ಪ್ರಸ್ತಾಪಿಸಿ ಈ ಕುರಿತು ಆಭರಣ ಮಳಿಗೆಗಳ ಹೊರಗೆ ಬೋರ್ಡ್ ಸಹ ಅಳವಡಿಸಲಾಗಿದೆ.
ಬುರ್ಖಾ, ಹೆಲ್ಮೆಟ್, ಮಾಸ್ಕ್ ಧರಿಸಿ ಬರುವ ವ್ಯಕ್ತಿಗಳಿಂದ ಕಳ್ಳತನ, ದರೋಡೆ, ವಂಚನೆ ಪ್ರಕರಣ ಹೆಚ್ಚಾದ ಕಾರಣಕ್ಕೆ ವಿವಿಧ ರಾಜ್ಯಗಳಲ್ಲಿ ವರ್ತಕರು ಇಂಥ ನಿರ್ಧಾರ ಕೈಗೊಂಡಿದ್ದಾರೆ.
- ಇತ್ತೀಚೆಗೆ ಬುರ್ಖಾ, ಹಿಜಾಬ್, ಮುಖಗವಸು ಧರಿಸಿ ಬಂದವರಿಂದ ಚಿನ್ನ ಕಳ್ಳತನ ಹೆಚ್ಚಳ
- ಹೀಗಾಗಿ ಬಿಹಾರದಲ್ಲಿ ಈ ರೀತಿ ಉಡುಪು ಧರಿಸಿದವರಿಗೆ ಚಿನ್ನ ಮಾರಾಟ ನಿರ್ಬಂಧವಾಗಿತ್ತು
- ಇದೀಗ ವಾರಾಣಸಿ, ಝಾನ್ಸೀಲೂ ಚಿನ್ನ ವರ್ತಕರಿಂದ ಬಿಹಾರ ರೀತಿಯ ಮಹತ್ವದ ನಿರ್ಧಾರ
- ಬುರ್ಖಾ, ಮಾಸ್ಕ್, ಹೆಲ್ಮೆಟ್ ಧರಿಸಿ ಬಂದರೆ ಚಿನ್ನ
- ಬೆಳ್ಳಿ ಮಾರಾಟ ಮಾರದಿರಲು ನಿರ್ಣಯ
- ಅಂಗಡಿಯ ಹೊರಗೆ ಬೋರ್ಡ್ ಅಳವಡಿಕೆ. ಇಂಥವರ ಬಗ್ಗೆ ಎಚ್ಚರದಿಂದ ಇರಲು ಸಂದೇಶ