ಅವಿವಾಹಿತ ಜೋಡಿಗೆ ಇನ್ನು ‘ಓಯೋ’ ರೂಂ ಇಲ್ಲ! ಪಾಲುದಾರ ಹೋಟೆಲ್‌ಗಳಿಗೆ ಹೊಸ ಚೆಕ್-ಇನ್ ನೀತಿ

KannadaprabhaNewsNetwork |  
Published : Jan 06, 2025, 01:03 AM ISTUpdated : Jan 06, 2025, 04:16 AM IST
ಓಯೋ | Kannada Prabha

ಸಾರಾಂಶ

ಟ್ರಾವೆಲ್ ಬುಕಿಂಗ್ ಪಾಲುದಾರನಾದ ‘ಓಯೋ’, ತನ್ನ ಪಾಲುದಾರ ಹೋಟೆಲ್‌ಗಳಿಗೆ ಹೊಸ ಚೆಕ್-ಇನ್ ನೀತಿಯನ್ನು ಪ್ರಾರಂಭಿಸಿದೆ. ಈ ಪ್ರಕಾರ ಓಯೋ ಮೂಲಕ ಇನ್ನು ಅವಿವಾಹಿತ ಜೋಡಿಗೆ ಚೆಕ್-ಇನ್ ಮಾಡಲು ಅವಕಾಶ ಇರುವುದಿಲ್ಲ.

ನವದೆಹಲಿ: ಟ್ರಾವೆಲ್ ಬುಕಿಂಗ್ ಪಾಲುದಾರನಾದ ‘ಓಯೋ’, ತನ್ನ ಪಾಲುದಾರ ಹೋಟೆಲ್‌ಗಳಿಗೆ ಹೊಸ ಚೆಕ್-ಇನ್ ನೀತಿಯನ್ನು ಪ್ರಾರಂಭಿಸಿದೆ. ಈ ಪ್ರಕಾರ ಓಯೋ ಮೂಲಕ ಇನ್ನು ಅವಿವಾಹಿತ ಜೋಡಿಗೆ ಚೆಕ್-ಇನ್ ಮಾಡಲು ಅವಕಾಶ ಇರುವುದಿಲ್ಲ.

ಹೊಸ ವರ್ಷದಿಂದ ಈ ನೀತಿ ಆರಂಭವಾಗಿದ್ದು, ಮೊದಲನೆಯದಾಗಿ ಉತ್ತರ ಪ್ರದೇಶದ ಮೇರಠ್‌ನಲ್ಲಿ ಇದು ಜಾರಿಗೆ ಬಂದಿದೆ. ನಂತರ ಇದರ ಪ್ರತಿಕ್ರಿಯೆ ಆಧರಿಸಿ ಇತರ ನಗರಗಳಲ್ಲೂ ಇದನ್ನು ವಿಸ್ತರಿಸಲಾಗುತ್ತದೆ.ಎಲ್ಲಾ ಜೋಡಿಗಳು ಆನ್‌ಲೈನ್ ಬುಕಿಂಗ್‌ ವೇಳೆ ಹಾಗೂ ಚೆಕ್-ಇನ್ ಮಾಡುವ ವೇಳೆ ತಮ್ಮ ಸಂಬಂಧದ ಮಾನ್ಯ ಪುರಾವೆಗಳನ್ನು ತೋರಿಸಬೇಕು. ಒಂದು ವೇಳೆ ತೋರಿಸದೇ ಇದ್ದರೆ ಅಂಥವರಿಗೆ ರೂಂ ಕೊಡಬಾರದು ಎಂದು ಸೂಚಿಸಲಾಗಿದೆ.

ಈ ನೀತಿ ಏಕೆ?:

ಸಮಾಜದ ಹಲವು ವರ್ಗಗಳಿಂದ, ಓಯೋ ಮೂಲಕ ನಡೆಯುವ ರೂಂ ಬುಕ್ಕಿಂಗ್‌ಗಳಿಗೆ ಆಕ್ಷೇಪ ಕೇಳಿಬಂದಿತ್ತು. ಅವಿವಾಹಿತ ಜೋಡಿಗಳು ದಂಪತಿ ಎಂದು ಸುಳ್ಳು ಹೇಳಿ ರೂಂ ಬುಕ್‌ ಮಾಡಿ ಅಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಾರೆ ಎಂಬ ಆರೋಪವಿತ್ತು. ಪ್ರಮುಖವಾಗಿ ಮೇರಠ್‌ನಲ್ಲಿ ಈ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಓಯೋ ಈ ಬದಲಾವಣೆ ಮಾಡಿದೆ 

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತ ವಿರೋಧಿ ಯುವ ನಾಯಕ ಉಸ್ಮಾನ್‌
20 ತಿಂಗಳಲ್ಲಿ ಶೇ.55,000ರಷ್ಟು ಏರಿಕೆ ಷೇರು!