ಶಿಕ್ಷಕರಷ್ಟೇ ಅಲ್ಲ, ಗಣತಿಗೆ ಖಾಸಗಿ ವ್ಯಕ್ತಿಗೂ ಅವಕಾಶ!

Published : Oct 18, 2026, 07:16 AM IST
Census

ಸಾರಾಂಶ

ಜನಗಣತಿಗೆ ಸರ್ಕಾರಿ ಶಿಕ್ಷಕರಷ್ಟೇ ಅಲ್ಲ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರನ್ನೂ ನೇಮಿಸಿಕೊಳ್ಳಬಹುದು ಎಂದು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಅದೇ ಆದೇಶದಲ್ಲಿ ಯಾವುದೇ ‘ಖಾಸಗಿ ವ್ಯಕ್ತಿ’ಗಳನ್ನೂ ಗಣತಿಗೆ ಬಳಸಿಕೊಳ್ಳಬಹುದು

ನವದೆಹಲಿ: ಜನಗಣತಿಗೆ ಸರ್ಕಾರಿ ಶಿಕ್ಷಕರಷ್ಟೇ ಅಲ್ಲ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರನ್ನೂ ನೇಮಿಸಿಕೊಳ್ಳಬಹುದು ಎಂದು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಅದೇ ಆದೇಶದಲ್ಲಿ ಯಾವುದೇ ‘ಖಾಸಗಿ ವ್ಯಕ್ತಿ’ಗಳನ್ನೂ ಗಣತಿಗೆ ಬಳಸಿಕೊಳ್ಳಬಹುದು ಎಂದು ಹೇಳಿರುವುದು ಬಹಿರಂಗವಾಗಿದೆ. ಖಾಸಗಿ ವ್ಯಕ್ತಿಗಳ ಬಳಕೆ ಇದೇ ಮೊದಲ ಬಾರಿ ಎನ್ನಲಾಗಿದೆ.

‘ಯಾವುದೇ ವ್ಯಕ್ತಿ’ಯನ್ನು ಗಣತಿದಾರರನ್ನಾಗಿ ನೇಮಿಸಬಹುದು

ಶುಕ್ರವಾರ ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾವು ಹೊರಡಿಸಿದ ನೋಟಿಫಿಕೇಷನ್‌ ಪ್ರಕಾರ ಶಿಕ್ಷಕರು, ಕ್ಲರ್ಕ್‌ಗಳು ಅಥವಾ ಯಾವುದೇ ಅಧಿಕಾರಿಗಳು ಅಥವಾ ‘ಯಾವುದೇ ವ್ಯಕ್ತಿ’ಯನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಗಣತಿದಾರರನ್ನಾಗಿ ನೇಮಿಸಬಹುದು.

ಯಾವುದೇ ಸರ್ಕಾರಿ ಸಂಸ್ಥೆಯ ಶಿಕ್ಷಕರು, ಸ್ಥಳೀಯ ಪ್ರಾಧಿಕಾರ, ಅನುದಾನಿತ ಅಥವಾ ಅನುದಾನ ರಹಿತ ಖಾಸಗಿ ಸಂಸ್ಥೆಗಳು, ಸೊಸೈಟಿಗಳು ಅಥವಾ ಟ್ರಸ್ಟ್‌ಗಳು, ಕ್ಲರ್ಕ್‌ಗಳು ಅಥವಾ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ ಅಥವಾ ಸ್ಥಾಪಿತ (ಸರ್ಕಾರಿ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು, ಬ್ಯಾಂಕ್‌ಗಳು, ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಸೊಸೈಟಿಗಳು ಮತ್ತು ಟ್ರಸ್ಟ್‌ಗಳು) ಯಾವುದೇ ವ್ಯಕ್ತಿಗಳು ಗಣತಿದಾರರಾಗಬಹುದಾಗಿದೆ.

ಆದೇಶದಲ್ಲೇನಿದೆ?

- ಗಣತಿಗೆ ಖಾಸಗಿ ಅನುದಾನಿತ, ಅನುದಾನರಹಿತ ಶಿಕ್ಷಕರನ್ನು ಬಳಸಬಹುದು

- ಕ್ಲರ್ಕ್‌ಗಳು ಅಥವಾ ಯಾವುದೇ ಅಧಿಕಾರಿಗಳನ್ನು ಕೂಡ ಬಳಸಿಕೊಳ್ಳಬಹುದು

- ಸೊಸೈಟಿ, ಟ್ರಸ್ಟ್‌ಗಳಲ್ಲಿನ ಯಾವುದೇ ವ್ಯಕ್ತಿಗಳೂ ಗಣತಿದಾರರಾಗಬಹುದು

- ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಗಣತಿದಾರನ್ನು ನೇಮಿಸಬಹುದು

- ಕೇಂದ್ರ ಸರ್ಕಾರದಿಂದ ಗಣತಿ ಬಗ್ಗೆ ಪರಿಷ್ಕೃತ ಅಧಿಸೂಚನೆ ಮೊನ್ನೆಪ್ರಕಟ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗಣತಿಗೆ ಖಾಸಗಿ ವ್ಯಕ್ತಿಗಳಿಗೆ ಅವಕಾಶಕ್ಕೆ ಕಾಂಗ್ರೆಸ್‌ ಕಿಡಿ
ದೀಪ್ಕೆ ಪ್ರತಿಭಟನೆಗೆ ದೆಹಲಿ ಪೊಲೀಸ್‌ 1 ವರ್ಷ ನಿರ್ಬಂಧ?