ಭಾರತಕ್ಕೂ ಬಂದಿದೆ ವಾರಕ್ಕೆ ಒಮ್ಮೆ ಪಡೆಯುವ ಇನ್ಸುಲಿನ್‌!

Published : Jul 10, 2026, 04:55 AM IST
 Insulin

ಸಾರಾಂಶ

ಡೆನ್ಮಾರ್ಕ್‌ನ ಔಷಧ ಕಂಪನಿ ನೊವೊ ನಾರ್ಡಿಸ್ಕ್ ಭಾರತದ ಮಧುಮೇಹಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿತ್ಯದ ಬದಲು ವಾರಕ್ಕೊಮ್ಮೆ ಮಾತ್ರ ಪಡೆಯುವ ಇನ್ಸುಲಿನ್‌ ಇಂಜೆಕ್ಷನ್‌ ಬಿಡುಗಡೆ ಮಾಡಿದೆ.

 ನವದೆಹಲಿ: ಡೆನ್ಮಾರ್ಕ್‌ನ ಔಷಧ ಕಂಪನಿ ನೊವೊ ನಾರ್ಡಿಸ್ಕ್ ಭಾರತದ ಮಧುಮೇಹಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿತ್ಯದ ಬದಲು ವಾರಕ್ಕೊಮ್ಮೆ ಮಾತ್ರ ಪಡೆಯುವ ಇನ್ಸುಲಿನ್‌ ಇಂಜೆಕ್ಷನ್‌ ಬಿಡುಗಡೆ ಮಾಡಿದೆ. ದೈನಂದಿನ ಇಂಜೆಕ್ಷನ್‌ನಿಂದ ಭಯಭೀತರಾಗುವ ಡಯಾಬಿಟಿಸ್‌ ರೋಗಿಗಳು ಇನ್ನು ವರ್ಷಕ್ಕೆ 365ರ ಬದಲು ಕೇವಲ 52 ಇಂಜೆಕ್ಷನ್‌ಗಳನ್ನು ಪಡೆದರೆ ಸಾಕಾಗಲಿದೆ.

ನೊವೊ ನಾರ್ಡಿಸ್ಕ್ ಭಾರತದಲ್ಲಿ ಇನ್ಸುಲಿನ್ ‘ಅವೀಕ್ಲಿ’ಯನ್ನು (ಇನ್ಸುಲಿನ್ ಐಕೋಡೆಕ್) ಬಿಡುಗಡೆ ಮಾಡಿದೆ. ಇದು ಜಗತ್ತಿನ ಮೊದಲ ವಾರಕ್ಕೊಮ್ಮೆ ಬಳಸುವ ಬೇಸಲ್ ಇನ್ಸುಲಿನ್ ಆಗಿದ್ದು, ಭಾರತವು ಇದನ್ನು ಪಡೆದ 6ನೇ ದೇಶವಾಗಿದೆ. ಈ ಇಂಜೆಕ್ಷನ್‌ಗಳು ಡೆನ್ಮಾರ್ಕ್‌ನಲ್ಲಿ ತಯಾರಾಗಲಿದ್ದು, ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ವೆಚ್ಚ ಎಷ್ಟು?:  

ವಯಸ್ಕರ ಟೈಪ್-1 ಮತ್ತು ಟೈಪ್-2 ಡಯಾಬಿಟಿಸ್ ಎರಡಕ್ಕೂ ಅವಿಕ್ಲಿಗೆ ಅನುಮೋದನೆ ದೊರಕಿದೆ. ಫ್ಲೆಕ್ಸ್‌ಟಚ್‌ ಎಂಬ ಪೆನ್‌ ಮೂಲಕ ಈ ಇಂಜೆಕ್ಷನ್‌ ಪಡೆಯಬಹುದಾಗಿದೆ. 1 ಮಿ.ಲೀ. ಫ್ಲೆಕ್ಸ್‌ಟಚ್ ಪೆನ್‌ನಲ್ಲಿ 700 ಯೂನಿಟ್ ಇನ್ಸುಲಿನ್ ಇರುತ್ತದೆ. ಅದರ ಬೆಲೆ 2,611 ರು. ಆಗಿದೆ. ಇದೇ ರೀತಿ 3 ಮಿ.ಲೀ. ಪೆನ್‌ನಲ್ಲಿ 2,100 ಯೂನಿಟ್ ಇದ್ದು, ಅದರ ಬೆಲೆ 7,833 ರು. ಆಗಿದೆ. ಸಾಮಾನ್ಯ ವಾರದ ಡೋಸ್ ಸುಮಾರು 70 ಯೂನಿಟ್ ಆಗಿರುವುದರಿಂದ, ಒಬ್ಬ ರೋಗಿಗೆ ವಾರಕ್ಕೆ ಸುಮಾರು 261-263 ರು. ವೆಚ್ಚವಾಗುತ್ತದೆ.

- ಭಾರತದ ಮಧುಮೇಹಿಗಳಿಗೆ ಸಂತಸದ ‘ಸಿಹಿ’ ಸುದ್ದಿ

- ಡೆನ್ಮಾರ್ಕ್‌ ಕಂಪನಿಯಿಂದ ಹೊಸ ಇನ್ಸಲಿನ್‌ ಇಂಜೆಕ್ಷನ್‌

- ‘ಅವೀಕ್ಲಿ’ ಹೆಸರಿನ ಇಂಜೆಕ್ಷನ್‌ ಮಾರುಕಟ್ಟೆಗೆ ಬಿಡುಗಡೆ

- ವರ್ಷಕ್ಕೆ 365ರ ಬದಲು ವಾರಕ್ಕೆ 1ರಂತೆ 52 ಇಂಜೆಕ್ಷನ್‌

- ಒಂದು ಇಂಜೆಕ್ಷನ್‌ ದರ ₹263. ಡೆನ್ಮಾರ್ಕ್‌ನಿಂದ ಆಮದು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮುಂಗಾರಿಗೆ ಬೆಚ್ಚಿದ ಉತ್ತರ, ಪಶ್ಚಿಮ
ಮುಂಗಾರು ಅಬ್ಬರಕ್ಕೆ ಹಲವು ರಾಜ್ಯಗಳು ತತ್ತರ