ಆಧಾರ್‌ ದೃಢೀಕೃತ ಆದ್ರೆ ಮಾತ್ರಜು.1ರಿಂದ ತತ್ಕಾಲ್‌ ಬುಕಿಂಗ್‌

KannadaprabhaNewsNetwork |  
Published : Jun 12, 2025, 01:26 AM ISTUpdated : Jun 12, 2025, 05:21 AM IST
ರೈಲ್ವೆ | Kannada Prabha

ಸಾರಾಂಶ

ಜು.1ರಿಂದ, ಆಧಾರ್‌ ದೃಢೀಕರಣಕ್ಕೆ ಒಳಪಡುವ ಗ್ರಾಹಕರು ಮಾತ್ರವೇ ತತ್ಕಾಲ್‌ ವ್ಯವಸ್ಥೆಯಡಿ ಟಿಕೆಟ್‌ ಬುಕ್‌ ಮಾಡಬಹುದು ಎಂದು ರೈಲ್ವೆ ಇಲಾಖೆ ಘೋಷಿಸಿದೆ.

ನವದೆಹಲಿ: ಜು.1ರಿಂದ, ಆಧಾರ್‌ ದೃಢೀಕರಣಕ್ಕೆ ಒಳಪಡುವ ಗ್ರಾಹಕರು ಮಾತ್ರವೇ ತತ್ಕಾಲ್‌ ವ್ಯವಸ್ಥೆಯಡಿ ಟಿಕೆಟ್‌ ಬುಕ್‌ ಮಾಡಬಹುದು ಎಂದು ರೈಲ್ವೆ ಇಲಾಖೆ ಘೋಷಿಸಿದೆ. ತತ್ಕಾಲ್‌ ಟಿಕೆಟ್‌ಗಳ ಬುಕಿಂಗ್ ಆರಂಭವಾದ 1 ನಿಮಿಷಕ್ಕೂ ಮೊದಲೇ ಎಲ್ಲಾ ಟಿಕೆಟ್‌ಗಳು ಬುಕ್‌ ಆಗುವುದರ ಹಿಂದೆ ಭಾರೀ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ರೈಲ್ವೆ ಈ ಹೊಸ ಯೋಜನೆ ಪರಿಚಯಿಸಿದೆ. ಇದರ ಜೊತೆಗೆ ಜು.15ರ ಬಳಿಕ ಆಧಾರ್‌ ಆಧರಿತ ಒಟಿಪಿ ವ್ಯವಸ್ಥೆಯನ್ನೂ ಪರಿಚಯಿಸಲಾಗುವುದು ಎನ್ನಲಾಗಿದೆ.

ತತ್ಕಾಲ್ ಬುಕಿಂಗ್ ಆರಂಭವಾದ ಮೊದಲ 30 ನಿಮಿಷ, ಭಾರತೀಯ ರೈಲ್ವೆಯ ಬುಕಿಂಗ್‌ ಏಜೆಂಟ್‌ಗಳು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಎಸಿ ಕ್ಲಾಸ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ 10.30ರ ವರೆಗೆ ಮತ್ತು ಎಸಿ ಏತರದಲ್ಲಿ 11 ಗಂಟೆಯಿಂದ 11.30ರ ತನಕ ಈ ನಿರ್ಬಂಧ ಇರಲಿದೆ. ಇದಕ್ಕೆ ಸೂಕ್ತವಾದ ಬದಲಾವಣೆಗಳನ್ನು ವ್ಯವಸ್ಥೆಯಲ್ಲಿ ಮಾಡಿಕೊಳ್ಳುವಂತೆ ಸಿಆರ್‌ಐಎಸ್‌ ಮತ್ತು ಐಆರ್‌ಸಿಟಿಸಿಗೆ ಸೂಚಿಸಲಾಗಿದೆ.

ಪ್ರಧಾನಿ ಮೋದಿ ಭೇಟಿಗೂ ಮುನ್ನ ಸಚಿವರಿಗೆ ಕೋವಿಡ್‌ ಟೆಸ್ಟ್‌ ಮಾಡ್ಸೋದು ಕಡ್ಡಾಯ?

ನವದೆಹಲಿ: ದೇಶಾದ್ಯಂತ ಕೋವಿಡ್‌ ಸೋಂಕು ಉಲ್ಭಣಗೊಳ್ಳುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಚಿವರಿಗೆ ಕೋವಿಡ್‌ ಪರೀಕ್ಷೆ (ಆರ್‌ಟಿ-ಪಿಸಿಆರ್‌) ಕಡ್ಡಾಯ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾರೇ ಭೇಟಿ ಮಾಡಬೇಕಿದ್ದರೂ ಅವರೂ ಸಹ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎನ್ನಲಾಗಿದೆ. 

ಸಂಪುಟ ಸಚಿವರು, ಮೋದಿಯವರನ್ನು ಭೇಟಿ ನಿಗದಿಯಾಗಿರುವ ಯಾರೇ ಆಗಲಿ ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಅದರ ನೆಗೆಟೀವ್‌ ರಿಸಲ್ಟ್‌ ಹೊಂದಿದ್ದರೆ ಮಾತ್ರ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

PREV
Read more Articles on

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !