ಕನಕದಾಸರ ಪುತ್ಥಳಿ ಸ್ಥಾಪನೆಗೆ ತೆಲಂಗಾಣ ಮುಸ್ಲಿಮರ ವಿರೋಧ

KannadaprabhaNewsNetwork |  
Published : May 30, 2024, 12:50 AM ISTUpdated : May 30, 2024, 05:26 AM IST
ಕನಕದಾಸರ ಪುತ್ಥಳಿ | Kannada Prabha

ಸಾರಾಂಶ

ಗದ್ವಾಲ್‌ ಜಿಲ್ಲೆಯ ಗುಟ್ಟ ಮಂಡಲ ಗೊರ್ಲಖಂಡದೊಡ್ಡಿ ಗ್ರಾಮದಲ್ಲಿ ನೂತನವಾಗಿ ಅನಾವರಣಗೊಳಿಸಲು ಮುಂದಾಗಿದ್ದ ಸಂತ ಕನಕದಾಸರ ಪುತ್ಥಳಿಯನ್ನು ಕೆಲ ಮುಸ್ಲಿಮರು ಬಲವಂತವಾಗಿ ತೆರವುಗೊಳಿಸಿದ ಘಟನೆ ನಡೆದಿದೆ.

ಗದ್ವಾಲ್‌: ಗದ್ವಾಲ್‌ ಜಿಲ್ಲೆಯ ಗುಟ್ಟ ಮಂಡಲ ಗೊರ್ಲಖಂಡದೊಡ್ಡಿ ಗ್ರಾಮದಲ್ಲಿ ನೂತನವಾಗಿ ಅನಾವರಣಗೊಳಿಸಲು ಮುಂದಾಗಿದ್ದ ಸಂತ ಕನಕದಾಸರ ಪುತ್ಥಳಿಯನ್ನು ಕೆಲ ಮುಸ್ಲಿಮರು ಬಲವಂತವಾಗಿ ತೆರವುಗೊಳಿಸಿದ ಘಟನೆ ನಡೆದಿದೆ.

ಖಾಸಗಿ ಜಾಗದಲ್ಲಿ ವಿಗ್ರಹ ನಿರ್ಮಿಸಲು ಮುಂದಾಗಿದ್ದು ಆ ಜಾಗದ ಮಾಲೀಕರು ಸಮ್ಮತಿ ಸೂಚಿಸಿದ್ದರು. ಆದರೆ ತಮ್ಮ ಮನೆಗಳಿಗೆ ಹೋಗಲು ಈ ವಿಗ್ರಹ ಅಡ್ಡಿಯಾಗಲಿದೆ ಎಂದು ಕಾರಣ ನೀಡಿ ಕೆಲ ಮುಸ್ಲಿಮರು ವಿಗ್ರಹವನ್ನು ಬಲವಂತವಾಗಿ ತೆರವುಗೊಳಿಸಿದ್ದಾರೆ.

ಈ ಘಟನೆಗೆ ಗ್ರಾಮಸ್ಥರು ಗರಂ ಆಗಿದ್ದು, ಕುರುಬ ಸಮುದಾಯ ಆರಾಧ್ಯ ದೈವರಾದ ಕನಕದಾಸರ ಪುತ್ಥಳಿಯನ್ನು ತೆರವುಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಲ್ಲಿ ಜಿಲ್ಲಾಡಳಿತ ಮುಸ್ಲಿಮರ ಪರ ಹೆಚ್ಚು ಒಲವು ಹೊಂದಿದ್ದಾರೆ. ಆದ್ದರಿಂದ ಇವರಿಗೆ ಇಷ್ಟ ಬಂದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದಿಲ್ಲಿ ಪೊಲೀಸರಿಂದ ಉಗ್ರ ಜಾಲ ಬಯಲು
ನಾನು ಸತ್ತರೆ ಏನ್ಮಾಡ್ಬೇಕು : ಆಪ್ತರಿಗೆ ಖಮೇನಿ ಸಲಹೆ!