ಔಷಧಿ ಕಂಪನಿ ಉದ್ಯೋಗಿಗಳಿಗೆ ಟಾಟಾ ಕಾರು ಗಿಫ್ಟ್‌!

KannadaprabhaNewsNetwork |  
Published : Nov 04, 2023, 12:45 AM IST

ಸಾರಾಂಶ

ಹರ್‍ಯಾಣದ ಔಷಧ ಕಂಪನಿಯ ಮಾಲೀಕರೊಬ್ಬರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಟಾಟಾ ಕಾರು ನೀಡಿ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ

ಚಂಡೀಗಢ: ಹರ್‍ಯಾಣದ ಔಷಧ ಕಂಪನಿಯ ಮಾಲೀಕರೊಬ್ಬರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಟಾಟಾ ಕಾರು ನೀಡಿ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ. ಮಿಕ್ಸ್‌ಕಾರ್ಟ್ ಎಂಬ ಕಂಪನಿಯ ಮಾಲೀಕ ಎಂ.ಕೆ ಭಾಟಿಯಾ ಅವರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಹಾಯಕರು ಸೇರಿದಂತೆ 12 ಉದ್ಯೋಗಿಗಳಿಗೆ 12 ನೂತನ ಟಾಟಾ ಪಂಚ್‌ ಕಾರು ಉಡುಗೊರೆ ನೀಡಿದ್ದಾರೆ. ಭಾಟಿಯಾ ತಮ್ಮ ಉದ್ಯೋಗಿಗಳಿಗೆ ಕಾರು ಕೀ ನೀಡುತ್ತಿರುವ ದೃಶ್ಯಗಳು ಭಾರೀ ವೈರಲ್‌ ಆಗಿವೆ. ಈ ಬಗ್ಗೆ ಮಾತನಾಡಿರುವ ಭಾಟಿಯಾ ‘ನಮ್ಮ ಸಿಬ್ಬಂದಿಯ ಕಠಿಣ ಶ್ರಮ ಮತ್ತು ಸಮರ್ಪಣಾ ಭಾವದ ಕೆಲಸದಿಂದ ಪ್ರಭಾವಿತನಾಗಿದ್ದ ನಾನು ಅವರಿಗೆ ಈ ಬಾರಿ ವಿಶೇಷ ಉಡುಗೊರೆ ನೀಡಲು ನಿರ್ಧರಿಸಿದ್ದೆ’ ಎಂದಿದ್ದಾರೆ. ಟಾಟಾ ಪಂಚ್‌ ಕಾರಿನ ಬೆಲೆ ಕನಿಷ್ಠ 6 ಲಕ್ಷ ರು. ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕಕ್ಕೆ ತಲೆನೋವಾದ ಇರಾನ್‌ ಅಗ್ಗದ ಅಸ್ತ್ರಗಳು
ನಾಯಕನಿಲ್ಲದ ಇರಾನ್‌ಗೆ ನೇತೃತ್ವ ಯಾರದ್ದು?