9 ಕನ್ನಡಿಗರು ಸೇರಿ 132 ಸಾಧಕರಿಗೆ ಪದ್ಮ ಗೌರವ

KannadaprabhaNewsNetwork |  
Published : Jan 26, 2024, 01:47 AM ISTUpdated : Jan 26, 2024, 07:34 AM IST
ಪದ್ಮ ಪ್ರಶಸ್ತಿ | Kannada Prabha

ಸಾರಾಂಶ

5 ಪದ್ಮ ವಿಭೂಷಣ, 17 ಪದ್ಮ ಭೂಷಣ, 110 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರಮುಖವಾಗಿ ವೆಂಕಯ್ಯನಾಯ್ಡು, ವೈಜಂಯತಿ ಬಾಲಿ, ಚಿರಂಜೀವಿ, ಬಿಂದೇಶ್ವರ್‌ ಪಾಠಕ್‌, ಪದ್ಮಾಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. 30 ಮಹಿಳೆಯರು, 9 ಮರಣೋತ್ತರ ಪ್ರಶಸ್ತಿಯನ್ನು ಪಟ್ಟಿ ಒಳಗೊಂಡಿದೆ.

ನವದೆಹಲಿ: ಗಣರಾಜ್ಯೋತ್ಸವದ ಮುನ್ನಾದಿನ ಒಟ್ಟಾರೆ 132 ಮಂದಿಗೆ ಪದ್ಮಪ್ರಶಸ್ತಿಯನ್ನು ಪ್ರಕಟಿಸಿದೆ. ಇದರಲ್ಲಿ 5 ಪದ್ಮ ವಿಭೂಷಣ, 17 ಪದ್ಮ ಭೂಷಣ, 110 ಪದ್ಮಶ್ರೀ ಪ್ರಕಟಿಸಲಾಗಿದೆ. 

ಇವರಲ್ಲಿ 30 ಮಂದಿ ಮಹಿಳೆಯರಿದ್ದರೆ 9 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 9 ಕನ್ನಡಿಗರು ಕೂಡಾ ಸೇರಿದ್ದಾರೆ.

ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಖ್ಯಾತ ನಟಿ ವೈಜಯಂತಿ ಬಾಲಿ, ನಟ ಚಿರಂಜೀವಿ, ಸಾಮಾಜಿಕ ಕಾರ್ಯಕರ್ತ ಬಿಂದೇಶ್ವರ್‌ ಪಾಠಕ್‌ ಮತ್ತು ಖ್ಯಾತ ನೃತ್ಯ ಕಲಾವಿದೆ ತಮಿಳುನಾಡಿನ ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಉಳಿದಂತೆ ನಟ ಮಿಥುನ್‌ ಚಕ್ರವರ್ತಿ, ಗಾಯಕಿ ಉಷಾ ಉತ್ತುಪ್‌, ಇತ್ತೀಚೆಗೆ ನಿಧನರಾದ ಖ್ಯಾತ ನಟ ವಿಜಯಕಾಂತ್‌, ತಮಿಳುನಾಡಿನ ಮಾಜಿ ರಾಜ್ಯಪಾಲೆ ದಿ.ಫಾತಿಮಾ ಬೀವಿ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾದ ಪ್ರಮುಖರಾಗಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !