ಸೂರ್ಯ, ಚಂದ್ರರ ಮೊದಲ ಚಿತ್ರ ಸೆರೆ ಹಿಡಿದ ಪಾಕ್‌ ಆರ್ಬಿಟರ್

KannadaprabhaNewsNetwork |  
Published : May 10, 2024, 11:45 PM ISTUpdated : May 11, 2024, 09:06 AM IST
ಚಂದ್ರ | Kannada Prabha

ಸಾರಾಂಶ

ಚೀನಾದ ಚಂದ್ರ ಮಿಷನ್ ಭಾಗವಾಗಿ ಉಡಾವಣೆಯಾದ ಕೆಲವೇ ದಿನಗಳಲ್ಲಿ ಅದರ ಜತೆ ತೆರಳಿದ್ದ ಪಾಕಿಸ್ತಾನದ ಅರ್ಬಿಟರ್‌, ಚಂದ್ರನ ಹಾಗೂ ಸೂರ್ಯನ ಮೊದಲ ಚಿತ್ರವನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ.

ಇಸ್ಲಾಮಾಬಾದ್: ಚೀನಾದ ಚಂದ್ರ ಮಿಷನ್ ಭಾಗವಾಗಿ ಉಡಾವಣೆಯಾದ ಕೆಲವೇ ದಿನಗಳಲ್ಲಿ ಅದರ ಜತೆ ತೆರಳಿದ್ದ ಪಾಕಿಸ್ತಾನದ ಅರ್ಬಿಟರ್‌, ಚಂದ್ರನ ಹಾಗೂ ಸೂರ್ಯನ ಮೊದಲ ಚಿತ್ರವನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ.

ಚೀನಾದ ಚಾಂಗ್-ಇ-6 ಯೋಜನೆಯ ಭಾಗವಾಗಿ ಅದರ ಜತೆ ತೆರಳಿದ್ದ ಪಾಕಿಸ್ತಾನದ ಮಿನಿ ಉಪಗ್ರಹ ‘ಐಕ್ಯೂಬ್-ಕಮರ್’, ಈ ಫೋಟೋ ಕಳುಹಿಸಿದೆ. ಮೇ 3ರಂದು ಚೀನಾ ಈ ಉಡಾವಣೆ ಮಾಡಲಾಗಿತ್ತು.

ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್ಎ) ಈ ಮಿಷನ್ ಯಶಸ್ವಿಯಾದ ಚಿತ್ರವನ್ನು ಅನಾವರಣಗೊಳಿಸಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಸುಪಾರ್ಕೋ ಹೇಳಿದೆ.ಮೇ 8ರಂದು ಪಾಕಿಸ್ತಾನದ ಕಾಲಮಾನದ ಪ್ರಕಾರ, ಮಧ್ಯಾಹ್ನ 1.14ಕ್ಕೆ ಪಾಕಿಸ್ತಾನದ ಕ್ಯೂಬ್‌ಸ್ಯಾಟ್‌ ಪೇಲೋಡ್‌, ಚಂದ್ರನ ಬಿಂದುವಿನ ಕಕ್ಷೆಯಲ್ಲಿ ಬೇರ್ಪಟ್ಟು ಚಿತ್ರಗಳನ್ನು ಕಳಿಸಿದೆ ಎಂದು ಅದು ಹೇಳಿಕೊಂಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸೋಲೊಪ್ಪದ ಸಾಹಸದ ಹಿಂದೆ ‘ಜಾಫರಿ’ ತಂತ್ರ!
ಇರಾನ್‌ ಶರಣಾಗತಿ ಸನ್ನಿಹಿತ: ಟ್ರಂಪ್‌