ತಾಳ್ಮೆ ಪರೀಕ್ಷಿಸಿದರೆ ಮತ್ತೆ ಸಿಂದೂರದಂಥ ಉತ್ತರ: ರಾಜನಾಥ್

Published : May 09, 2025, 05:33 AM IST
Rajnath Singh

ಸಾರಾಂಶ

ಯಾರಾದರೂ ಭಾರತದ ತಾಳ್ಮೆ ಪರೀಕ್ಷಿಸಿದರೆ, ಆಪರೇಷನ್‌ ಸಿಂದೂರ್‌ನಂಥ ಉತ್ತರಕ್ಕೆ ಸಜ್ಜಾಗಿ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುಡುಗಿದ್ದಾರೆ.

ನವದೆಹಲಿ: ‘ಯಾರಾದರೂ ಭಾರತದ ತಾಳ್ಮೆ ಪರೀಕ್ಷಿಸಿದರೆ, ಆಪರೇಷನ್‌ ಸಿಂದೂರ್‌ನಂಥ ಉತ್ತರಕ್ಕೆ ಸಜ್ಜಾಗಿ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುಡುಗಿದ್ದಾರೆ.

ಗುರುವಾರ ಮಾತನಾಡಿದ ಸಿಂಗ್‌, ‘ಭಾರತ ಎಂದಿಗೂ ಮಾತುಕತೆಯಲ್ಲಿ ನಂಬಿಕೆ ಇಟ್ಟಿರುವ ಗೌರವಯುತ ದೇಶ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ಯಾರಾದರೂ ಪರೀಕ್ಷಿಸಿದರೆ, ನಿನ್ನೆಯ ರೀತಿ (ಆಪರೇಷನ್‌ ಸಿಂದೂರ್‌) ಉತ್ತರಕ್ಕೆ ಸಜ್ಜಾಗಿ’ ಎಂದು ಪಾಕ್‌ ಸೇರಿದಂತೆ ಇತರೆ ದೇಶಗಳಿಗೆ ಎಚ್ಚರಿಕೆ ನೀಡಿದರು. ಈ ದಾಳಿಯು ನಮ್ಮ ಕೌಶಲ್ಯಯುತ ಮತ್ತು ಅಸಾಧಾರಣ ಸೈನಿಕರಿಂದ ಸಾಧ್ಯವಾಗಿದೆ ಎಂದು ಸೇನೆಯನ್ನು ಕೊಂಡಾಡಿದರು.

PREV

Recommended Stories

ಭಾರತದಲ್ಲಿನ ಶೇ.10 ಸಿಬ್ಬಂದಿಗೆ ಒರಾಕಲ್‌ ಕಂಪನಿ ಗೇಟ್‌ಪಾಸ್‌
ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ!