ಹಿಂದೂರಾಷ್ಟ್ರ ಮರುಸ್ಥಾಪನೆಗೆನೇಪಾಳಿ ಕಾಂಗ್ರೆಸ್‌ ಆಗ್ರಹ

KannadaprabhaNewsNetwork |  
Published : Feb 20, 2024, 01:57 AM ISTUpdated : Feb 20, 2024, 08:25 AM IST
ನೇಪಾಳದಲ್ಲಿ ಪ್ರತಿಭಟನೆ | Kannada Prabha

ಸಾರಾಂಶ

ನೇಪಾಳಕ್ಕಿದ್ದ ಹಿಂದೂ ರಾಷ್ಟ್ರ ಎಂಬ ಸ್ಥಾನವನ್ನು ಮರಳಿ ನೀಡಬೇಕು ಎಂದು ನೇಪಾಳಿ ಕಾಂಗ್ರೆಸ್‌ನ 22 ಮಂದಿ ಸದಸ್ಯರು ಸೋಮವಾರ ಆಗ್ರಹಿಸಿದ್ದಾರೆ. ಆದರೆ ಅದೇ ಪಕ್ಷದ ಕೆಲವು ನಾಯಕರು ಇದಕ್ಕೆ ವಿರೋಧವನ್ನು ಸಹ ವ್ಯಕ್ತಪಡಿಸಿದ್ದಾರೆ.

ಕಾಠ್ಮಂಡು: ನೇಪಾಳಕ್ಕಿದ್ದ ಹಿಂದೂ ರಾಷ್ಟ್ರ ಎಂಬ ಸ್ಥಾನವನ್ನು ಮರಳಿ ನೀಡಬೇಕು ಎಂದು ನೇಪಾಳಿ ಕಾಂಗ್ರೆಸ್‌ನ 22 ಮಂದಿ ಸದಸ್ಯರು ಸೋಮವಾರ ಆಗ್ರಹಿಸಿದ್ದಾರೆ. ಆದರೆ ಅದೇ ಪಕ್ಷದ ಕೆಲವು ನಾಯಕರು ಇದಕ್ಕೆ ವಿರೋಧವನ್ನು ಸಹ ವ್ಯಕ್ತಪಡಿಸಿದ್ದಾರೆ.

ಲಾತಿಪುರ್‌ನ ಗೋದಾವರಿಯಲ್ಲಿ ಆಯೋಜಿಸಿದ್ದ ಮಹಾಸಮಿತಿ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಆಗ್ರಹ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ 22 ಮಂದಿ ನೇಪಾಳಿ ಕಾಂಗ್ರೆಸ್‌ನ ಸದಸ್ಯರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ ಪಕ್ಷದ ಕೇಂದ್ರೀಯ ಕಾರ್ಯಕಾರಿ ಸಮಿತಿ ಈ ಮನವಿಯನ್ನು ಒಪ್ಪಿಕೊಂಡಿಲ್ಲ. ನೇಪಾಳದಲ್ಲಿನ ಜನಸಂಖ್ಯೆಯಲ್ಲಿ ಶೇ.81ರಷ್ಟು ಮಂದಿ ಹಿಂದೂಗಳಾಗಿದ್ದಾರೆ. 2008ರಲ್ಲಿ ನೇಪಾಳಕ್ಕಿಂತ ಹಿಂದೂ ರಾಷ್ಟ್ರ ಪಟ್ಟ ತೆಗೆದು ಗಣರಾಜ್ಯ ಎಂದು ಘೋಷಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಂಗಳೂರು ಯುವತಿ ಜತೆ ಮದುವೆಯಾದ ಮಹಾಕುಂಭ ಖ್ಯಾತಿಯ ‘ಐಐಟಿ ಬಾಬಾ’
ಕೋಮಾದಲ್ಲಿ ಮೊಜ್ತಬಾ, ಕೋಂ ನಗರದಲ್ಲಿ ಚಿಕಿತ್ಸೆ