ಪ್ರಧಾನಿ ಮೋದಿಗೆ ವಾಸ್ತವತೆಯ ಅರಿವಿಲ್ಲ: ಪ್ರಿಯಾಂಕಾ

KannadaprabhaNewsNetwork |  
Published : Apr 15, 2024, 01:16 AM ISTUpdated : Apr 15, 2024, 06:48 AM IST
Priyanka Gandhi rally in Uttarakhand

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಗೆ ಹಣದುಬ್ಬರ ಮತ್ತು ನಿರುದ್ಯೋಗದ ವಾಸ್ತವಿಕ ಅರಿವಿಲ್ಲ. ಅವರಿಗೆ ಅಧಿಕಾರದ ಮದ ಏರಿರುವುದರಿಂದ ಅವರ ಬಳಿ ಇರುವ ಅಧಿಕಾರಿಗಳು ಮೋದಿಗೆ ಸತ್ಯಾಂಶ ಹೇಳಲು ಹೆದರುತ್ತಾರೆ.

ಜೈಪುರ: ಪ್ರಧಾನಿ ನರೇಂದ್ರ ಮೋದಿಗೆ ಹಣದುಬ್ಬರ ಮತ್ತು ನಿರುದ್ಯೋಗದ ವಾಸ್ತವಿಕ ಅರಿವಿಲ್ಲ. ಅವರಿಗೆ ಅಧಿಕಾರದ ಮದ ಏರಿರುವುದರಿಂದ ಅವರ ಬಳಿ ಇರುವ ಅಧಿಕಾರಿಗಳು ಮೋದಿಗೆ ಸತ್ಯಾಂಶ ಹೇಳಲು ಹೆದರುತ್ತಾರೆ. 

ಈ ಹಿನ್ನೆಲೆಯಲ್ಲಿ ಪ್ರಧಾನಿ ಈ ಕುರಿತು ನೈಜ ಪರಿಹಾರ ಕಂಡುಕೊಳ್ಳದೆ ಜನರಿಗೆ ಸಂಬಂಧಪಡದ ಯೋಜನೆಗಳತ್ತ ಗಮನ ಹರಿಸುತ್ತಾರೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಕಿಡಿ ಕಾರಿದರು.

ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಪರ ಪ್ರಚಾರ ಕೈಗೊಂಡ ವೇಳೆ ಮಾತನಾಡಿ, ‘ದೇಶದಲ್ಲಿ ಪ್ರಧಾನಿ ಮೋದಿ ಏನೇ ಮಾತನಾಡಿದರೂ ಜನತೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಮಾತನಾಡುತ್ತಾರೆ. ಅವರಿಗೆ ದೇಶದಲ್ಲಿರುವ ನೈಜ ಹಣದುಬ್ಬರ ಮತ್ತು ನಿರುದ್ಯೋಗದ ಅಗಾಧತೆಯ ಪ್ರಮಾಣದ ಅರಿವು ಇಲ್ಲವೇ ಇಲ್ಲ. ಹೀಗಾಗಿ ಅವರು ತಮ್ಮನ್ನು ತಾವು ಉಬ್ಬೇರಿಸಿ ಮಾತನಾಡುತ್ತಾರೆ’ ಎಂದು ಟೀಕಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ