ಚಂಡೀಗಢದಲ್ಲಿ 3 ಹೊಸ ಕ್ರಿಮಿನಲ್‌ ಕಾನೂನು 100% ಜಾರಿ

KannadaprabhaNewsNetwork |  
Published : Dec 04, 2024, 12:31 AM IST
ಮೋದಿ | Kannada Prabha

ಸಾರಾಂಶ

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ 3 ಕ್ರಿಮಿನಲ್‌ ಕಾನೂನುಗಳನ್ನು ಕೇಂದ್ರಾಡಳಿತ ಪ್ರದೇಶ ಚಂಡೀಗಢ ಶೇ.100ರಷ್ಟು ಅನುಷ್ಠಾನಗೊಳಿಸಿದೆ. ಈ ಮೂಲಕ ಇವುಗಳನ್ನು ಶತ ಪ್ರತಿಶತ ಜಾರಿ ಮಾಡಿದ ಮೊದಲ ಆಡಳಿತ ಪ್ರದೇಶ ಎಂಬ ಖ್ಯಾತಿಗೆ ಚಂಡೀಗಢ ಪಾತ್ರವಾಗಿದೆ,

ಪಿಟಿಐ ಚಂಡೀಗಢ

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ 3 ಕ್ರಿಮಿನಲ್‌ ಕಾನೂನುಗಳನ್ನು ಕೇಂದ್ರಾಡಳಿತ ಪ್ರದೇಶ ಚಂಡೀಗಢ ಶೇ.100ರಷ್ಟು ಅನುಷ್ಠಾನಗೊಳಿಸಿದೆ. ಈ ಮೂಲಕ ಇವುಗಳನ್ನು ಶತ ಪ್ರತಿಶತ ಜಾರಿ ಮಾಡಿದ ಮೊದಲ ಆಡಳಿತ ಪ್ರದೇಶ ಎಂಬ ಖ್ಯಾತಿಗೆ ಚಂಡೀಗಢ ಪಾತ್ರವಾಗಿದೆ,

ಈ 3 ಹೊಸ ಕ್ರಿಮಿನಲ್ ಕಾನೂನುಗಳ ಯಶಸ್ವಿ ಅನುಷ್ಠಾನವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ- ಇವು ಈ 3 ಹೊಸ ಕಾಯ್ದೆಗಳಾಗಿವೆ. ಇವನ್ನು ಕ್ರಮವಾಗಿ ಬ್ರಿಟಿಷ್ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆ ಬದಲಿಗೆ ಜು.1ರಿಂದ ಜಾರಿಗೊಳಿಸಲಾಗಿದೆ.

ಇವು ಈಗ ಚಂಡೀಗಢದಲ್ಲಿ ಸಂಪೂರ್ಣ ಅನುಷ್ಠಾನವಾಗಿವೆ. ಇವುಗಳನ್ನು ಹೇಗೆ ಠಾಣೆಗಳಲ್ಲಿ ಅನುಸರಿಸಲಾಗುತ್ತಿದೆ ಎಂಬ ನೇರ ಪ್ರಾತ್ಯಕ್ಷಿಕೆಯನ್ನು ಮಂಗಳವಾರ ಮೋದಿ ವೀಕ್ಷಿಸಿದರು.

ಬಳಿಕ ಅವರು ಮಾತನಾಡಿ, ‘ಈ ಕಾನೂನುಗಳು ವಸಾಹತುಶಾಹಿ ಯುಗದ ಕಾನೂನುಗಳ ಅಂತ್ಯವನ್ನು ಸೂಚಿಸುತ್ತವೆ. ವಸಾಹತುಶಾಹಿ ಕಾಲದ ಕಾನೂನುಗಳು ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗ ದೌರ್ಜನ್ಯ ಮತ್ತು ಶೋಷಣೆಯ ಮಾಧ್ಯಮಳಾಗಿದ್ದವು’ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ’ಚಂಡೀಗಢದಲ್ಲಿ ಈ ಮೂರು ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆ. ಎಫ್‌ಐಆರ್‌ ದಾಖಲಾದ 3 ವರ್ಷದೊಳಗೆ ನ್ಯಾಯ ಸಿಗಲಿದೆ. ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ ವ್ಯವಸ್ಥೆಯಾಗಲಿದೆ’ ಎಂದರು.

ಶೇ.100 ಅನುಷ್ಠಾನ ಎಂದರೇನು?

ಮೂರೂ ಕಾನೂನುಗಳ ಜಾರಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳು, ಸಾಫ್ಟ್‌ವೇರ್, ತರಬೇತಿ ಪಡೆದ ಮಾನವ ಸಂಪನ್ಮೂಲಗಳು ಮತ್ತು ಹೊಸ ಕಾನೂನುಗಳನ್ನು ಸುಲಭವಾಗಿ ಜಾರಿಗೆ ತರಲು ಸಂಪೂರ್ಣ ಗಣಕೀಕೃತ ನ್ಯಾಯಾಲಯಗಳು- ಇವೆಲ್ಲವನ್ನೂ ಚಂಡೀಗಢದಲ್ಲಿ ಸಂಪೂರ್ಣ ಅನುಷ್ಠಾನ ಮಾಡಲಾಗಿದೆ. ಜತೆಗೆ ಇ-ಸಾಕ್ಷ್ಯ, ನ್ಯಾಯ ಸೇತು, ನ್ಯಾಯ ಶ್ರುತಿ ಮತ್ತು ಇ-ಸಮ್ಮಾನ್ ಎಂಬ ಆ್ಯಪ್‌ ಆರಂಭಿಸಲಾಗಿದೆ. ಈ ಮೂಲಕ ಹೊಸ 3 ಅಪರಾಧ ಕಾನೂನುಗಳನ್ನು ಶೇ.100ರಷ್ಟು ಜಾರಿಗೆ ತಂದ ಮೊದಲ ಆಡಳಿತ ಪ್ರದೇಶ ಎಂಬ ಖ್ಯಾತಿಯನ್ನು ಚಂಡೀಗಢ ಪಡೆದಿದೆ.

PREV

Latest Stories

ನಿಮಿಷಪ್ರಿಯಾಗೆ ಕ್ಷಮಾದಾನ ಬೇಡ, ಗಲ್ಲಾಗಲಿ
ಅಕ್ಬರ್‌ ಕ್ರೂರ, ಆದರೆ ಸಹಿಷ್ಣು, ಬಾಬರ್‌ ನಿರ್ದಯಿ: ಕೇಂದ್ರೀಯ ಪಠ್ಯ
ದೇಶದಲ್ಲಿ 9 ಲಕ್ಷ ಮಕ್ಕಳು ಒಂದೂ ಲಸಿಕೆ ಪಡೆದಿಲ್ಲ: ವರದಿ