ಕಾಶ್ಮೀರದ ಶಂಕರಾಚಾರ್ಯ ಬೆಟ್ಟಕ್ಕೆ ಮೋದಿ ನಮನ

KannadaprabhaNewsNetwork |  
Published : Mar 08, 2024, 01:53 AM ISTUpdated : Mar 08, 2024, 09:25 AM IST
PM Narendra Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ, ಶ್ರೀನಗರದಿಂದ ತುಸು ದೂರದಲ್ಲಿರುವ ಶಂಕರಾಚಾರ್ಯರ ಬೆಟ್ಟಕ್ಕೆ ದೂರದಿಂದಲೇ ನಮಿಸಿದರು.

ಶ್ರೀನಗರ: ವಿಧಿ 370ರ ರದ್ದತಿ ನಂತರ ಮೊದಲ ಬಾರಿ ಕಾಶ್ಮೀರದ ಪ್ರವಾಸಕ್ಕೆ ಗುರುವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಶ್ರೀನಗರದಿಂದ ತುಸು ದೂರದಲ್ಲಿರುವ ಶಂಕರಾಚಾರ್ಯರ ಬೆಟ್ಟಕ್ಕೆ ದೂರದಿಂದಲೇ ನಮಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಕಾಶ್ಮೀರದ ಭೇಟಿಯ ವೇಳೆ ಶ್ರೀನಗರದಲ್ಲಿರುವ ಶಂಕರಾಚಾರ್ಯ ಬೆಟ್ಟದ ಸೌಂದರ್ಯವನ್ನು ದೂರದಿಂದಲೇ ಸವಿಯುವ ಅವಕಾಶ ಲಭಿಸಿದೆ. ಅದಕ್ಕೆ ಶಿರಬಾಗಿ ವಂದಿಸಿದ್ದೇನೆ’ ಎಂದು ಚಿತ್ರಗಳನ್ನೂ ಟ್ಯಾಗ್‌ ಮಾಡಿದ್ದಾರೆ.

ಶಂಕರಾಚಾರ್ಯ ಬೆಟ್ಟದ ಮಹತ್ವ: ಕಾಶ್ಮೀರದ ಶ್ರೀನಗರದ ಬಳಿಯಿರುವ ಶಂಕರಾಚಾರ್ಯ ಬೆಟ್ಟಕ್ಕೆ ಅದ್ವೈತ ಸಿದ್ಧಾಂತದ ಪ್ರತಿಪಾದಕ ಮತ್ತು ಬೋಧಕರಾಗಿದ್ದ ಆದಿ ಶಂಕರರು ಭೇಟಿ ನೀಡಿರುವ ಐತಿಹ್ಯವಿದೆ. 

ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಮತ್ತು ಬೆಟ್ಟದ ಶಿಖರದಲ್ಲಿರುವ ದೇಗುಲಕ್ಕೆ ಶಂಕರರ ಹೆಸರು ಬಂದಿತೆಂದು ನಂಬಲಾಗಿದೆ. 

ಇಲ್ಲಿಗೆ ಹಿಂದೂಗಳು ಅಮರನಾಥ ಯಾತ್ರೆಯ ವೇಳೆ ಭೇಟಿ ನೀಡುತ್ತಾರೆ. ಈ ಸಮಯದಲ್ಲಿ ಶಿವಲಿಂಗವನ್ನು ಬೆಟ್ಟದ ಮೇಲಿರುವ ಆದಿ ಶಂಕರ ದೇಗುಲಕ್ಕೆ ಕೊಂಡೊಯ್ಯಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಲೆಬನಾನ್‌ ಮನೆ ಮೇಲೆ ಇಸ್ರೇಲ್‌ ಅಪಾಯಕಾರಿ ಬಿಳಿ ರಂಜಕ ಪ್ರಯೋಗ
ಸಾಕುನಾಯಿ ಬಿಟ್ಟು ದುಬೈನಿಂದ ವಲಸಿಗರ ಪಲಾಯನ!