ಸ್ತ್ರೀಯರಿಗೆ ಗರ್ಭಕಂಠ ಕ್ಯಾನ್ಸರ್‌ ಲಸಿಕೆಗೆ ಮೋದಿ ಚಾಲನೆ

KannadaprabhaNewsNetwork |  
Published : Mar 01, 2026, 02:15 AM IST
Vaccination

ಸಾರಾಂಶ

ಇತ್ತೀಚೆಗೆ ಸ್ತ್ರೀಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಲು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿರುವ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜಸ್ಥಾನದ ಅಜ್ಮೇರ್‌ನಲ್ಲಿ ಚಾಲನೆ ನೀಡಿದರು.

 ಜೈಪುರ: ಇತ್ತೀಚೆಗೆ ಸ್ತ್ರೀಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಲು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿರುವ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜಸ್ಥಾನದ ಅಜ್ಮೇರ್‌ನಲ್ಲಿ ಚಾಲನೆ ನೀಡಿದರು.

14 ವರ್ಷ ಹಾಗೂ ಅದಕ್ಕೆ ಮೇಲ್ಪಟ್ಟ ಹಲವು ಮಹಿಳೆಯರು ಈ ಲಸಿಕೆಯನ್ನು ಹಾಕುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಕೆಲಕಾಲ ಮಾತುಕತೆಯನ್ನೂ ನಡೆಸಿದರು. 

ಏನಿದು ಲಸಿಕೆ?:

ವಿಶ್ವಾದ್ಯಂತ ಪ್ರಯೋಗಕ್ಕೆ ಒಳಪಟ್ಟು ಉತ್ತಮ ಫಲಿತಾಂಶ ನೀಡಿರುವ ಈ ಲಸಿಕೆಯು, ಟೈಪ್‌ 16, ಟೈಪ್‌ 18 ಸೇರಿದಂತೆ 4 ವಿಧದ ಎಚ್‌ಪಿವಿಗಳಿಂದ ಸ್ತ್ರೀಯರಿಗೆ ರಕ್ಷಣೆ ನೀಡುವ ಮೂಲಕ ಗರ್ಭಕಂಠದ ಕ್ಯಾನ್ಸರ್‌ಅನ್ನು ತಡೆಗಟ್ಟುತ್ತದೆ. ಇದರ ಒಂದೇ ಒಂದು ಡೋಸ್‌ ಪರಿಣಾಮಕಾರಿಯಾಗಿ ಈ ಕೆಲಸ ಮಾಡಲಿದೆ.

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ

ಇನ್ನು ಮುಂದೆ ಎಚ್‌ಪಿವಿ ಲಸಿಕೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರ, ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ವೈದ್ಯಕೀಯ ಕಾಲೇಜು, ಉಪ-ಜಿಲ್ಲಾ ಮತ್ತು ಜಿಲ್ಲಾ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೊಲಿವಿಯಾದಲ್ಲಿ ಸರಕು ಸಾಗಣೆ ವಿಮಾನ ಪತನ : 15 ಮಂದಿ ಸಾವು
ಆಫ್ಘನ್‌ ಮೇಲೆ ಪಾಕ್‌ ದಾಳಿ : ಸಾವಿನ ಸಂಖ್ಯೆ 331ಕ್ಕೇರಿಕೆ