ರೆವಾಡಿ (ಹರ್ಯಾಣ): ರೈತ ಪ್ರತಿಭಟನೆ ಆರಂಭದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರತಿಕ್ರಿಯೆ ನೀಡಿದ್ದು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತ ಪರವಾಗಿದ್ದು, ರೈತರಿಗೆ ಲಾಭ ತರುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಿರತವಾಗಿದೆ’ ಎಂದು ಹೇಳಿದ್ದಾರೆ.
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಂಜಾಬ್, ಹರ್ಯಾಣದ ರೈತರು ದೆಹಲಿ ಚಲೋಗೆ ಕರೆ ಕೊಟ್ಟು ಬೃಹತ್ ಪ್ರತಿಭಟನೆ ಆರಂಭಿಸಿರುವ ನಡುವೆಯೇ ಪ್ರಧಾನಿ ಮೋದಿ ಈ ಮಾತುಗಳನ್ನು ಆಡಿದ್ದಾರೆ.
ಶುಕ್ರವಾರ ಇಲ್ಲಿ ಏಮ್ಸ್‌ಗೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ಕೇಂದ್ರ ಸರ್ಕಾರ ರೈತರಿಗೆ ಬ್ಯಾಂಕ್‌ಗಳಿಗೆ ಸಾಲ ಪಡೆಯಲು ಗ್ಯಾರಂಟಿ ನೀಡಿವೆ.
ಏಕೆಂದರೆ ಮೊದಲೆಲ್ಲಾ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ನಿರಾಕರಿಸುತ್ತಿದ್ದವು. ಆದರೆ ನಾವು ರೈತರಿಗೆ ಮೋದಿ ಗ್ಯಾರಂಟಿ ನೀಡಿದ್ದೇವೆ. ಬ್ಯಾಂಕ್‌ಗಳು ರೈತರಿಗೆ ಸಾಲ ನೀಡದೇ ಇದ್ದರೂ ನಾವು ಅವರಿಗೆ ಗ್ಯಾರಂಟಿ ನೀಡಿದ್ದೇವೆ’ ಎಂದು ಹೇಳಿದರು.