ಡ್ರಗ್ಸ್‌-ಉಗ್ರವಾದದ ನಂಟು ಕಟ್‌ : ಜಿ-20ಯಲ್ಲಿ ಪ್ರಧಾನಿ ಮೋದಿ ಕರೆ

KannadaprabhaNewsNetwork |  
Published : Nov 23, 2025, 02:00 AM IST
PM Modi

ಸಾರಾಂಶ

‘ಇಂದು ಮಾದಕವಸ್ತು ಹಾಗೂ ಭಯೋತ್ಪಾದಕ ಜಾಲಗಳ ನಡುವಿನ ನಂಟನ್ನು ದುರ್ಬಲಗೊಳಿಸಿ ಅವುಗಳನ್ನು ತುಂಡರಿಸಬೇಕಿದೆ. ಇದಕ್ಕಾಗಿ ಜಿ-20 ರಾಷ್ಟ್ರಗಳು ಸೇರಿಕೊಂಡು ಗುಂಪೊಂದನ್ನು ರಚಿಸುವುದು ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಈ ಮೂಲಕ ಪಾಕ್‌ಗೆ ಪರೋಕ್ಷ ಚಾಟಿ ಬೀಸಿದ್ದಾರೆ.

 ಜೋಹಾನ್ಸ್‌ ಬರ್ಗ್‌ : ‘ಇಂದು ಮಾದಕವಸ್ತು ಹಾಗೂ ಭಯೋತ್ಪಾದಕ ಜಾಲಗಳ ನಡುವಿನ ನಂಟನ್ನು ದುರ್ಬಲಗೊಳಿಸಿ ಅವುಗಳನ್ನು ತುಂಡರಿಸಬೇಕಿದೆ. ಇದಕ್ಕಾಗಿ ಜಿ-20 ರಾಷ್ಟ್ರಗಳು ಸೇರಿಕೊಂಡು ಗುಂಪೊಂದನ್ನು ರಚಿಸುವುದು ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಈ ಮೂಲಕ ಪಾಕ್‌ಗೆ ಪರೋಕ್ಷ ಚಾಟಿ ಬೀಸಿದ್ದಾರೆ.ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮೋದಿ ಮಾತನಾಡಿ 4 ಸೂತ್ರಗಳನ್ನು ಮಂಡಿಸಿದರು.

ಭಾರತದಲ್ಲಿ ಮಾದಕವಸ್ತು ಜಾಲ ಮತ್ತು ಉಗ್ರವಾದದ ಉಪಟಳ

‘ಭಾರತದಲ್ಲಿ ಮಾದಕವಸ್ತು ಜಾಲ ಮತ್ತು ಉಗ್ರವಾದದ ಉಪಟಳ ಹೆಚ್ಚುತ್ತಿರುವ ಹೊತ್ತಿನಲ್ಲೇ, ಅವುಗಳ ವಿರುದ್ಧ ಹೋರಾಡಲು ಜಿ-20 ರಾಷ್ಟ್ರಗಳು ಒಟ್ಟಾಗಿ ಗುಂಪು ರಚಿಸಬೇಕ.ಪುರಾತನ ಜ್ಞಾನವು ಮುಂದಿನ ಪೀಳಿಗೆಗೂ ದಾರಿದೀಪವಾಗುವಂತೆ ಮಾಡಲು ಸಾಂಪ್ರದಾಯಿಕ ಜಾಗತಿಕ ಜ್ಞಾನ ಭಂಡಾರ ರಚಿಸಬೇಕು. ಉತ್ತಮ ಜಾಗತಿಕ ಆರೋಗ್ಯ ವ್ಯವಸ್ಥೆ ನಿರ್ಮಾಣಕ್ಕಾಗಿ ಜಿ20 ದೇಶಗಳ ವೈದ್ಯಕೀಯ ತಜ್ಞರನ್ನು ಒಟ್ಟುಗೂಡಿಸಿ ಆರೋಗ್ಯ ರಕ್ಷಣಾ ಪ್ರತಿಕ್ರಿಯೆ ತಂಡ ರೂಪಿಸಬೇಕು. ಜಾಗತಿಕ ಅಭಿವೃದ್ಧಿಗೆ ಆಫ್ರಿಕಾದ ಏಳ್ಗೆ ಅತಿ ಮುಖ್ಯ. ಹೀಗಾಗಿ ಆ ಖಂಡದಲ್ಲಿ 10 ಲಕ್ಷ ಕುಶಲ ಕೆಲಸಗಾರರನ್ನು ಸೃಷ್ಟಿಸಬೇಕು’ ಎಂಬ 4 ಉಪಕ್ರಮ ಪ್ರಸ್ತಾಪಿಸಿದರು.

‘ಅಭಿವೃದ್ಧಿ ಮಾನದಂಡಗಳನ್ನು ಪುನರ್ವಿಮರ್ಶಿಸಲು ಮತ್ತು ಎಲ್ಲರನ್ನೂ ಒಳಗೊಳ್ಳುವ, ಸುಸ್ಥಿರ ಬೆಳವಣಿಗೆಯತ್ತ ಗಮನಹರಿಸಲು ಇದು ಸರಿಯಾದ ಸಮಯ. ಈ ನಿಟ್ಟಿನಲ್ಲಿ ಮುಂದುವರೆಯಲು ಭಾರತದ ನಾಗರಿಕ ಮೌಲ್ಯಗಳು, ವಿಶೇಷವಾಗಿ ಸಮಗ್ರ ಮಾನವತಾವಾದದ ತತ್ವ ಮಾರ್ಗದರ್ಶನ ಮಾಡುತ್ತದೆ’ ಎಂದರು.

ವಿಶ್ವ ಗಣ್ಯರು, ಬ್ರಿಟನ್‌, ಇಟಲಿ ಪ್ರಧಾನಿ ಮೋದಿ ಮಾತುಕತೆ

ಜೋಹಾನ್ಸ್‌ಬರ್ಗ್‌: ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು 3 ದಿನ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವಸಂಸ್ಥೆ ಮುಖ್ಯಸ್ಥರಾಗಿರುವ ಆ್ಯಂಟೋನಿಯೋ ಗುಟೆರಸ್‌, ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಶನಿವಾರ ಭೇಟಿಯಾಗಿದ್ದಾರೆ. ಈ ವೇಳೆ, ಸಂಬಂಧ ವೃದ್ಧಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ.ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ‘ಗುಟೆರಸ್‌ ಅವರೊಂದಿಗಿನ ಚರ್ಚೆ ಫಲಪ್ರದವಾಗಿತ್ತು. ಸ್ಟಾರ್ಮರ್‌ ಭೇಟಿಯೂ ಅದ್ಭುತವಾಗಿತ್ತು. ಉಭಯ ದೇಶಗಳ ಸಂಬಂಧವನ್ನು ಹೀಗೆಯೇ ಮುಂದುವರೆಸುತ್ತೇವೆ’ ಎಂದು ಹೇಳಿದ್ದಾರೆ.ಶುಕ್ರವಾರ ಅವರು ಆಸ್ಟ್ರೇಲಿಯಾ ಪ್ರಧಾನಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

PREV
Read more Articles on

Recommended Stories

ಪೈಲಟ್‌ ನಮಾಂಶ್‌ ತವರಿನಲ್ಲಿ ಮಡುಗಟ್ಟಿದ ಶೋಕ
ತಿರುಪತೀಲಿ 20 ಕೋಟಿ ಕಲಬೆರಕೆ ಲಡ್ಡು ಹಂಚಿಕೆ