ದಶಕಗಳ ಸಾಧನೆ ಜನರ ಮುಂದಿಟ್ಟ ಪ್ರಧಾನಿ ಮೋದಿ

KannadaprabhaNewsNetwork |  
Published : Mar 17, 2024, 01:45 AM ISTUpdated : Mar 17, 2024, 08:28 AM IST
ಪ್ರಧಾನಿ ಮೋದಿ | Kannada Prabha

ಸಾರಾಂಶ

ದಶಕಗಳ ಸಾಧನೆ ಜನರ ಮುಂದಿಟ್ಟ ಪ್ರಧಾನಿ ಮೋದಿ, 10 ವರ್ಷದ ನನ್ನ ಯಶಸ್ವಿ ಅಧಿಕಾರಾವಧಿಗೆ ಜನರ ಸಹಕಾರ ಕಾರಣ. ನಮ್ಮ ಅನೇಕ ಯೋಜನೆ ಯಶಸ್ವಿಯಾಗಿದ್ದು, ಇದಕ್ಕೆ ಜನರ ವಿಶ್ವಾಸ ಕಾರಣ ಎಂದು ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆಯಾಗಿದೆ.

ನವದೆಹಲಿ: ದೇಶದ ಜನತೆಯ ಸಹಯೋಗವೇ ತಾವು 10 ವರ್ಷಗಳ ಕಾಲ ಪ್ರಧಾನಿಯಾಗಿ ಅಧಿಕಾರ ಪೂರ್ಣಗೊಳಿಸುವುದಕ್ಕೆ ಪ್ರಮುಖ ಕಾರಣ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಯ ವಿಶ್ವಾಸ ಮತ್ತು 140 ಕೋಟಿ ಜನರ ಬೆಂಬಲ ತಮಗೆ ಸ್ಪೂರ್ತಿ ನೀಡುವುದರ ಜೊತೆಗೆ ಪ್ರೋತ್ಸಾಹವನ್ನೂ ನೀಡುತ್ತದೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಕಳೆದ 10 ವರ್ಷಗಳಲ್ಲಿ ಸರ್ಕಾರದ ಸಾಧನೆಗಳನ್ನು ಬಣ್ಣಿಸುವ ಕುರಿತಾದ ‘ಮೇರಾ ಭಾರತ್‌ ಮೇರಾ ಪರಿವಾರ್‌’ ಎಂಬ ವಿಡಿಯೋ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅದರಲ್ಲಿ ದೇಶದ ವಿವಿಧ ಭಾಗಗಳ, ವಿವಿಧ ವಲಯದ ಜನತೆ ಸರ್ಕಾರದ ಯೋಜನೆಗಳಿಂದ ಲಾಭ ಪಡೆದ ಜನರ ಅನುಭವ ಮತ್ತು ಅವರು ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿಯ ಅಧಿಕಾರ ಬಯಸುವ ಕುರಿತ ಅಭಿಮತವನ್ನು ಜನರ ಮುಂದಿಟ್ಟಿದ್ದಾರೆ.

ಜೊತೆಗೆ, ಜನರ ಜೀವನದಲ್ಲಿ ಕಂಡುಬಂದ ಬದಲಾವಣೆಯೇ ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರದ ಅತಿದೊಡ್ಡ ಸಾಧನೆ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಬಡವರು, ರೈತರು, ಯುವಸಮೂಹ ಮತ್ತು ಮಹಿಳೆಯರ ಜೀವನ ಗುಣಮಟ್ಟ ಸುಧಾರಿಸುವಲ್ಲಿ ಸರ್ಕಾರದ ದೃಢನಿಶ್ಚಯ ಇದನ್ನು ಸಾಧ್ಯವಾಗಿಸಿದೆ ಎಂದು ಹೇಳಿದರು.

ಬಡವರಿಗೆ ಗುಣಮಟ್ಟದ ಮನೆ, ವಿದ್ಯುತ್‌, ಕುಡಿಯುವ ನೀರು, ಅಡುಗೆ ಅನಿಲ, ಉಚಿತ ವೈದ್ಯಕೀಯ ಚಿಕಿತ್ಸೆಯ ಲಭ್ಯತೆ, ರೈತರಿಗೆ ಹಣಕಾಸಿನ ನೆರವು, ವಿವಿಧ ಯೋಜನೆಗಳ ಮೂಲಕ ಮಹಿಳೆಯರಿಗೆ ಹಣಕಾಸಿನ ನೆರವಿನ ಯೋಜನೆಗಳ ಯಶಸ್ಸು ಜನತೆ ಸರ್ಕಾರದ ಮೇಲೆ ಇಟ್ಟ ವಿಶ್ವಾಸದಿಂದಲೇ ಸಾಧ್ಯವಾಯಿತು. 

ನಮ್ಮ ದೇಶದ ಸಂಪ್ರದಾಯ ಮತ್ತು ಆಧುನಿಕತೆ ಎರಡನ್ನೂ ಒಂದರ ಜೊತೆಗೆ ಇನ್ನೊಂದನ್ನು ಇಟ್ಟುಕೊಂಡು ಮುಂದೆ ಸಾಗುತ್ತದೆ. 

ಕಳೆದೊಂದು ದಶಕದಲ್ಲಿ ದೇಶವು ಹೊಸ ಯುಗದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹಿಂದೆಂದೂ ಕಂಡುಕೇಳರಿಯದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಇದೇ ಅವಧಿಯಲ್ಲಿ ದೇಶದ ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಕೆಲಸವೂ ಆಗಿದೆ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ