ಪ್ರಧಾನಿ ಮನಮೋಹನ್‌ ಸಿಂಗ್‌ ಸೋನಿಯಾ ಗಾಂಧಿ ಪಿಎಸ್‌ ರೀತಿ ಇದ್ದರು : ಜೆಎನ್‌ಯು ಅಧ್ಯಾಪಕ

KannadaprabhaNewsNetwork |  
Published : Apr 20, 2025, 01:59 AM ISTUpdated : Apr 20, 2025, 04:21 AM IST
manmohan singh

ಸಾರಾಂಶ

‘ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಂತೆ ಇದ್ದರು. ತಮ್ಮ ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳ ಶ್ರೇಯವನ್ನೂ ಅವರು ಪಡೆಯುತ್ತಿರಲಿಲ್ಲ’ ಎಂದು ಪ್ರಧಾನಿಗಳ ಕಚೇರಿ ಬಗ್ಗೆ ಜೆಎನ್‌ಯುನ ಅಧ್ಯಾಪಕರೊಬ್ಬರು ಬರೆದ ಪುಸ್ತಕದಲ್ಲಿ ದಾಖಲಿಸಲಾಗಿದೆ.

 ನವದೆಹಲಿ: ‘ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಂತೆ ಇದ್ದರು. ತಮ್ಮ ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳ ಶ್ರೇಯವನ್ನೂ ಅವರು ಪಡೆಯುತ್ತಿರಲಿಲ್ಲ’ ಎಂದು ಪ್ರಧಾನಿಗಳ ಕಚೇರಿ ಬಗ್ಗೆ ಜೆಎನ್‌ಯುನ ಅಧ್ಯಾಪಕರೊಬ್ಬರು ಬರೆದ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಹಿಮಾಂಶು ರಾಯ್‌ ಅವರು ‘ಪಿಎಂಒ ಥ್ರೂ ದ ಇಯರ್ಸ್‌’ ಪುಸ್ತಕದಲ್ಲಿ, ‘ಸಿಂಗ್‌ ಅವರು ಗಾಂಧಿ ಪರಿವಾರದ ಪರವಾಗಿ ಪ್ರಧಾನಿ ಹುದ್ದೆಯಲ್ಲಿ ಕುಳಿತಿದ್ದರು. ಗಾಂಧಿ ಪರಿವಾರದ ಪ್ರತಿ ಅವರಿಗಿದ್ದ ನಿಷ್ಠೆ ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ವಿಪರೀತ ಪರಿಣಾಮ ಬೀರುತ್ತಿತ್ತು. ಆಡಳಿತ ನಡೆಸುವಾಗ ಅವರು ಸೋನಿಯಾರ ಆಪ್ತ ಕಾರ್ಯದರ್ಶಿಯಂತೆ ಇರುತ್ತಿದ್ದರು. ಸಿಂಗ್‌ ಅವರನ್ನು ಅವರ ಸಮಗ್ರತೆ ಮತ್ತು ಜ್ಞಾನಕ್ಕಾಗಿ ಮಾತ್ರ ಗೌರವಿಸಲಾಗುತ್ತಿತ್ತು’ ಎಂದು ಬರೆಯಲಾಗಿದೆ. ಜೊತೆಗೆ, ನರಸಿಂಹರಾವ್‌ ಅವರ ಅವಧಿಯಲ್ಲಿ ಇದು ನಡೆಯಲಿಲ್ಲ ಎನ್ನಲಾಗಿದೆ.

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಅವಧಿಯಲ್ಲಿ ಸಚಿವ ಸಂಪುಟ ಮಾದರಿಯ ಸರ್ಕಾರವನ್ನು ಪ್ರಧಾನಿ ಕೇಂದ್ರಿತ ಸರ್ಕಾರವನ್ನಾಗಿ ಬದಲಾಯಿಸಲಾಗಿತ್ತು. ಇನ್ನು ಕಳೆದ ಪ್ರಧಾನಿಗಳ ಅವಧಿಗೆ ಹೋಲಿಸಿದರೆ, ಮೋದಿಯವರ ನೇತೃತ್ವದಲ್ಲಿ ಪಿಎಂ ಕಚೇರಿಯು ಅತ್ಯಂತ ಡಿಜಿಟಲೀಕರಣಗೊಂಡ, ಸ್ಪಂದಿಸುವ ಮತ್ತು ಪಾರದರ್ಶಕವಾಗಿದೆ ಎಂದೂ ರಾಯ್‌ ಬಣ್ಣಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ