ಭಾರತದಲ್ಲಿ ಮೊದಲ ಬಾರಿಗೆ ಯುನೆಸ್ಕೋದ ವಿಶ್ವ ಪಾರಂಪರಿಕ ಸಮ್ಮೇಳನ : ಹಳೆಬೀಡು ದರ್ಶನ

KannadaprabhaNewsNetwork |  
Published : Jul 21, 2024, 01:18 AM ISTUpdated : Jul 21, 2024, 04:57 AM IST
ಪಟ್ಟದ ಕಲ್ಲು | Kannada Prabha

ಸಾರಾಂಶ

ಭಾರತದಲ್ಲಿ ಮೊದಲ ಬಾರಿಗೆ ಯುನೆಸ್ಕೋದ ವಿಶ್ವ ಪಾರಂಪರಿಕ ಸಮ್ಮೇಳನವು ನಡೆಯಲಿದ್ದು, ದೇಶದ ಮೂರು ವಿಶ್ವ ಪಾರಂಪರಿಕ ತಾಣಗಳ ಪ್ರದರ್ಶನ ಸಮ್ಮೇಳನದಲ್ಲಿ ನಡೆಯಲಿದೆ.

ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ಯುನೆಸ್ಕೋದ ವಿಶ್ವ ಪಾರಂಪರಿಕ ಸಮ್ಮೇಳನವು ನಡೆಯಲಿದ್ದು, ದೇಶದ ಮೂರು ವಿಶ್ವ ಪಾರಂಪರಿಕ ತಾಣಗಳ ಪ್ರದರ್ಶನ ಸಮ್ಮೇಳನದಲ್ಲಿ ನಡೆಯಲಿದೆ. ಅದರಲ್ಲಿ ಕರ್ನಾಟಕದ ಹಳೆಬೀಡಿನ ಹೊಯ್ಸಳ ದೇಗುಲ ಕೂಡ ಜಾಗತಿಕ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ರಿಯಾಲಿಟಿ ಮೂಲಕ ಪ್ರದರ್ಶನಗೊಳ್ಳಲಿದೆ.

ಸಮ್ಮೇಳನದಲ್ಲಿ ವಿಶ್ವ ಪಾರಂಪರಿಕ ಪಟ್ಟಿಯಲ್ಲಿನ ಒಟ್ಟು 27 ತಾಣಗಳನ್ನು ಎಆರ್‌ ಮತ್ತು ವಿಆರ್‌ ತಂತ್ರಜ್ಞಾನದ ಮೂಲಕ ತೋರಿಸಲಾಗುತ್ತದೆ. ಭಾರತದಿಂದ 3 ಪಾರಂಪರಿಕ ತಾಣಗಳು ಸಾಂಸ್ಕೃತಿಕ ತಾಣಗಳ ವಿಭಾಗದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ಕರ್ನಾಟದ ಇತಿಹಾಸ ಪ್ರಸಿದ್ಧ ಹಳೆಬೀಡಿನ ಹೊಯ್ಸಳ ದೇಗುಲ ಕೂಡ ಸೇರಿದೆ. ಇದರ ಜೊತೆಗೆ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಜಾಗತಿಕ ಕಾರ್ಯಕ್ರಮಕ್ಕೆ ಲಾಂಛನವಾಗಿ ಹಂಪಿಯ ಕಲ್ಲಿನ ರಥವನ್ನು ಬಳಸಿಕೊಂಡಿರುವುದು ವಿಶೇಷ.

ಜುಲೈ 21ರಿಂದ 31ರವರೆಗೆ ನವದೆಹಲಿಯಲ್ಲಿ 46ನೇ ವಿಶ್ವ ಪಾರಂಪರಿಕ ಸಮ್ಮೇಳನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ