ದಿಢೀರ್ ರಾಜಕೀಯ ಬೆಳವಣಿಗೆ : ಪಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನದಿಂದ ಮಗನನ್ನೇ ಕಿತ್ತುಹಾಕಿದ ತಂದೆ ರಾಮದಾಸ್‌!

KannadaprabhaNewsNetwork |  
Published : Apr 11, 2025, 12:36 AM ISTUpdated : Apr 11, 2025, 04:37 AM IST
ಪಿಎಂಕೆ | Kannada Prabha

ಸಾರಾಂಶ

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ತಮಿಳುನಾಡಿನಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ಘಟಿಸಿದ್ದು, ಪಟ್ಟಾಲಿ ಮಕ್ಕಳ್‌ ಕಟ್ಟಿ (ಪಿಎಂಕೆ) ಪಕ್ಷದ ಅಧ್ಯಕ್ಷ ಸ್ಥಾನದಿಂದ ತಮ್ಮ ಪುತ್ರ,    ಅನ್ಬುಮಣಿ ರಾಮ್‌ದಾಸ್‌ ರನ್ನು  ಅವರ ತಂದೆ, ಪಕ್ಷದ ಸಂಸ್ಥಾಪಕ ರಾಮದಾಸ್‌ ಕಿತ್ತುಹಾಕಿದ್ದಾರೆ.

ವಿಲ್ಲುಪುರಂ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ತಮಿಳುನಾಡಿನಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ಘಟಿಸಿದ್ದು, ಪಟ್ಟಾಲಿ ಮಕ್ಕಳ್‌ ಕಟ್ಟಿ (ಪಿಎಂಕೆ) ಪಕ್ಷದ ಅಧ್ಯಕ್ಷ ಸ್ಥಾನದಿಂದ ತಮ್ಮ ಪುತ್ರ, ಕೇಂದ್ರದ ಮಾಜಿ ಸಚಿವ ಅನ್ಬುಮಣಿ ರಾಮ್‌ದಾಸ್‌ ಅವರನ್ನು ಸ್ವತಃ ಅವರ ತಂದೆ, ಪಕ್ಷದ ಸಂಸ್ಥಾಪಕ ರಾಮದಾಸ್‌ ಕಿತ್ತುಹಾಕಿದ್ದಾರೆ. ಜೊತೆಗೆ ಅಧ್ಯಕ್ಷ ಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಈ ಬದಲಾವಣೆಯ ಕುರಿತು ಮಾತನಾಡಿದ ರಾಮದಾಸ್‌, ‘2026ರ ವಿಧಾನಸಭೆ ಚುನಾವಣೆಗಾಗಿ ನಾನು ರೂಪಿಸಿರುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಇಂತಹ ಬದಲಾವಣೆಗಳು ಅಗತ್ಯ’ ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚೆನ್ನೈಗೆ ಆಗಮಿಸಲಿರುವ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿರುವುದು ಗಮನಾರ್ಹ.

ಅನ್ಬುಮಣಿ ಬಿಜೆಪಿ ಕಡೆಗೆ ಹೆಚ್ಚು ಒಲವು ಹೊಂದಿದ್ದಾರೆ. ಆದರೆ ದ್ರಾವಿಡ ಪಕ್ಷಗಳ ಹೊರತಾಗಿ ಬೇರೆಯವರೊಂದಿಗೆ ಪಿಎಂಕೆ ಮೈತ್ರಿ ಮಾಡಿಕೊಳ್ಳಬಾರದು. ಜೊತೆಗೆ ಪಕ್ಷದ ಮುಖ್ಯ ಮುಖ್ಯ ಉದ್ದೇಶ ವಣಿಯಾರ್‌ ಸಮುದಾಯದ ಅಭಿವೃದ್ಧಿ ಆಗಿರಬೇಕು ಎಂಬುದು ರಾಮದಾಸ್‌ ನಿಲುವು. ಈ ವಿಷಯದಲ್ಲಿ ಅಪ್ಪ- ಮಗನ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಜೊತೆಗೆ ಪಕ್ಷದ ಯುವ ಘಟಕದ ಕಾರ್ಯದರ್ಶಿಯನ್ನಾಗಿ ರಾಮದಾಸ್‌ ತಮ್ಮ ಹಿರಿಯ ಪುತ್ರಿಯ ಮಗ ಮುಕುಂದನ್‌ ನೇಮಕಕ್ಕೆ ಅನ್ಬುಮಣಿ ವಿರೋಧ ಮಾಡಿದ್ದರು. ಹೀಗೆ ಹಲವು ಸಮಯದಿಂದ ನಡೆಯುತ್ತಿದ್ದ ಸಂಘರ್ಷ ಇದೀಗ ಪಕ್ಷದ ಚುಕ್ಕಾಣಿ ಅನ್ಬುಮಣಿ ಕೈತಪ್ಪುವಂತೆ ಮಾಡಿದೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ