ಅಮೀರ್‌ ಖಾನ್‌ ಅಮೆರಿಕ ಅಳಿಯಗೆ ದೇಶ ಬಿಡಲು ಪೊಲೀಸರಿಂದ ತಾಕೀತು

Published : Oct 16, 2026, 07:01 AM IST
Bollywood celebrities react to Imran Khan Mumbai police notice

ಸಾರಾಂಶ

‘ಬಾಲಿವುಡ್ ನಟ ಇಮ್ರಾನ್ ಖಾನ್ ಅಮೆರಿಕದ ಪ್ರಜೆ. ಅವರು ಮುಂಬೈನಲ್ಲಿ ನಡೆದ ಜಿರಳೆ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ವಲಸೆ ನಿಯಮಗಳ ಉಲ್ಲಂಘನೆ. ಹೀಗಾಗಿ ಅ.28ರೊಳಗೆ ಭಾರತವನ್ನು ತೊರೆಯಬೇಕು’ ಎಂದು ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ.

ಮುಂಬೈ : ‘ಬಾಲಿವುಡ್ ನಟ ಇಮ್ರಾನ್ ಖಾನ್ ಅಮೆರಿಕದ ಪ್ರಜೆ. ಅವರು ಮುಂಬೈನಲ್ಲಿ ನಡೆದ ಜಿರಳೆ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ವಲಸೆ ನಿಯಮಗಳ ಉಲ್ಲಂಘನೆ. ಹೀಗಾಗಿ ಅ.28ರೊಳಗೆ ಭಾರತವನ್ನು ತೊರೆಯಬೇಕು’ ಎಂದು ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ.

ಅಮೀರ್‌ ಖಾನ್‌ ಅವರ ಅಳಿಯನೂ ಆದ ಇಮ್ರಾನ್ ಖಾನ್

ಇದರ ಬೆನ್ನಲ್ಲೇ ಈ ಸೂಚನೆ ಪ್ರಶ್ನಿಸಿ ಪ್ರಸಿದ್ಧ ನಟ ಅಮೀರ್‌ ಖಾನ್‌ ಅವರ ಅಳಿಯನೂ ಆದ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಬಹುಶಃ ಶುಕ್ರವಾರ ಅಥವಾ ಸೋಮವಾರ ಅರ್ಜಿ ಸಲ್ಲಿಕೆ ನಿರೀಕ್ಷೆ ಇದೆ. ಈ ನಡುವೆ, ನೋಟಿಸ್‌ಗೆ ಮಹಾರಾಷ್ಟ್ರ ಪ್ರತಿಪಕ್ಷಗಳು ಕಿಡಿಕಾರಿವೆ.

ನೋಟಿಸ್‌ ಏಕೆ?:

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಅ.10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ಇಮ್ರಾನ್ ಖಾನ್ ಭಾಗವಹಿಸಿದ್ದರು. ಇಮ್ರಾನ್ ಅಮೆರಿಕದ ನಾಗರಿಕರಾಗಿದ್ದು, ಭಾರತದಲ್ಲಿರಲು ‘ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ’ (ಒಸಿಐ) ಕಾರ್ಡ್ ಹೊಂದಿದ್ದಾರೆ. ವಿದೇಶಿ ಪ್ರಜೆಗಳು ಭಾರತದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ. ಇದು ವಲಸೆ ಮತ್ತು ವಿದೇಶಿಯರ ಕಾಯ್ದೆಯ ನಿಬಂಧನೆಗಳ ಉಲ್ಲಂಘನೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಸ್ಲಾಂಗೆ ಮತಾಂತರ ಆದವರಿಗೆ ಮೀಸಲಾತಿ ಇಲ್ಲ: ಸುಪ್ರೀಂಕೋರ್ಟ್‌
ಬಾಂಗ್ಲಾ ಜೆನ್‌ಝೀ ಹೋರಾಟ ನಮಗೆ ಸ್ಫೂರ್ತಿ: ನೇಹಾ ಬೋರಾ ವಿವಾದ