ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್‌ ಸಿಂಗ್‌ ಪ್ರಮಾಣ

KannadaprabhaNewsNetwork |  
Published : Jun 06, 2024, 01:46 AM IST
ಪ್ರೇಮ್‌ ಸಿಂಗ್‌ | Kannada Prabha

ಸಾರಾಂಶ

*ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್‌ ಸಿಂಗ್‌ ಪ್ರಮಾಣ ಸ್ವೀಕರಿಸಲಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅವರ ಎಸ್‌ಕೆಎಂ 32ರ ಪೈಕಿ 31 ಸ್ಥಾನ ಗೆದ್ದಿದ್ದ ಅವರ ಪಕ್ಷ ಪ್ರತಿಸ್ಪರ್ಧಿ ಎಸ್‌ಡಿಎಫ್‌ ಪಕ್ಷವನ್ನು ಧೂಳೀಪಟ ಮಾಡಿತ್ತು.

ಗ್ಯಾಂಗ್ಟಕ್‌: ಸಿಕ್ಕಿಂ ವಿಧಾನಸಭೆಯಲ್ಲಿ ಭಾರೀ ಬಹುಮತದ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಿದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ನಾಯಕ ಪ್ರೇಮ್‌ ಸಿಂಗ್‌ ತಮಂಗ್‌ ಜೂ.9ಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ತಮಂಗ್‌, ‘ಗ್ಯಾಂಗ್ಟಕ್‌ನಲ್ಲಿರುವ ಪಾಲ್ಜೊರ್‌ ಕ್ರೀಡಾಂಗಣದಲ್ಲಿ ಸಿಕ್ಕಿಂ ಸಂಪುಟ ಪ್ರಮಾಣವಚನ ಸ್ವೀಕರಿಸಲಿದೆ. ಈ ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಗಳಿಂದ ನಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಲಿದ್ದಾರೆ’ ಎಂದು ತಿಳಿಸಿದರು. ಜೊತೆಗೆ ತಮ್ಮ ಸಂಸದ ಕೇಂದ್ರದಲ್ಲಿ ಎನ್‌ಡಿಎ ಕೂಟದ ಭಾಗವಾಗಿರುವುದಾಗಿ ಸ್ಪಷ್ಟಪಡಿಸಿದರು.ಜೂ.2ರಂದು ಪ್ರಕಟವಾದ ಫಲಿತಾಂಶದಲ್ಲಿ ಸಿಕ್ಕಿಂ ವಿಧಾನಸಭೆಯಲ್ಲಿರುವ 32 ಕ್ಷೇತ್ರಗಳ ಪೈಕಿ 31ರಲ್ಲಿ ಎಸ್‌ಕೆಎಂ ಅಭೂತಪೂರ್ವ ಗೆಲುವು ದಾಖಲಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ
ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು