ಮರ್ಡೋಕ್‌ ವಿರುದ್ಧ ಟ್ರಂಪ್‌ ₹80,000 ಕೋಟಿ ಮಾನನಷ್ಟ ಕೇಸ್‌

KannadaprabhaNewsNetwork |  
Published : Jul 20, 2025, 01:15 AM ISTUpdated : Jul 20, 2025, 06:25 AM IST
ಟ್ರಂಪ್ | Kannada Prabha

ಸಾರಾಂಶ

 ಜೆಫ್ರಿ ಎಪ್ಸ್ಟೀನ್‌ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ವರದಿ ಪ್ರಕಟಿಸಿದ್ದ ಪ್ರತಿಷ್ಠಿತ ದಿ ವಾಲ್ ಸ್ಟ್ರೀಟ್‌ ಜರ್ನಲ್‌ ಮತ್ತು ಮಾಧ್ಯಮ ದೊರೆ ರೂಪರ್ಟ್‌ ಮರ್ಡೋಕ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 80 ಸಾವಿರ ಕೋಟಿ ರು. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

 ವಾಷಿಂಗ್ಟನ್‌: ಲೈಂಗಿಕ ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿಯಾಗಿದ್ದ ಜೆಫ್ರಿ ಎಪ್ಸ್ಟೀನ್‌ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ವರದಿ ಪ್ರಕಟಿಸಿದ್ದ ಪ್ರತಿಷ್ಠಿತ ದಿ ವಾಲ್ ಸ್ಟ್ರೀಟ್‌ ಜರ್ನಲ್‌ ಮತ್ತು ಮಾಧ್ಯಮ ದೊರೆ ರೂಪರ್ಟ್‌ ಮರ್ಡೋಕ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 80 ಸಾವಿರ ಕೋಟಿ ರು. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

2003ರಲ್ಲಿ ಟ್ರಂಪ್‌ ಅವರು ಜೆಫ್ರಿ ಎಪ್ಸ್ಟೀನ್‌ ಹುಟ್ಟುಹಬ್ಬಕ್ಕೆ ಶುಭಕೋರುವ ಸಂಬಂಧ ಪತ್ರವೊಂದನ್ನು ಬರೆದಿದ್ದರು. ಆ ಪತ್ರದಲ್ಲಿ ಲೈಂಗಿಕತೆ ಬಿಂಬಿಸುವ ಮಹಿಳೆಯ ಬೆತ್ತಲೆ ಚಿತ್ರಗಳನ್ನು ಟ್ರಂಪ್‌ ಚಿತ್ರಿಸಿದ್ದರು ಹಾಗೂ ಆ ಪತ್ರದಲ್ಲಿ ತಮ್ಮ ಸಹಿಯನ್ನೂ ಹಾಕಿದ್ದರು ಎಂದು ವಾಲ್‌ ಸ್ಟ್ರೀಟ್‌ ಪತ್ರಿಕೆ ವರದಿ ಮಾಡಿತ್ತು.

ಆದರೆ ಟ್ರಂಪ್‌ ಮಾತ್ರ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ನಾನು ಯಾವತ್ತೂ ಚಿತ್ರ ಬಿಡಿಸಿಲ್ಲ, ಅದು ನನ್ನ ಬರಹವೂ ಅಲ್ಲ. ಇದೊಂದು ಸುಳ್ಳುವರದಿ. ಇದರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಮಿಯಾಮಿ ಫೆಡರಲ್‌ ಕೋರ್ಟಲ್ಲಿ ಮುರ್ಡೋಕ್‌, ಡೌ ಜೋನ್ಸ್‌, ನ್ಯೂಸ್‌ ಕಾರ್ಪ್‌ ಮತ್ತು ಅದರ ಮುಖ್ಯ ಕಾರ್ಯನಿರ್ವಾಹಕ ರಾಬರ್ಟ್‌ ಥಾಮ್ಸನ್‌, ವಾಲ್‌ ಸ್ಟ್ರೀಟ್‌ ಜರ್ನಲ್‌ನ ಇಬ್ಬರು ವರದಿಗಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಟ್ರಂಪ್‌ ಅವರ ಮಾನಹಾನ ಮಾಡಿ ಹಣಕಾಸು ಮತ್ತು ಗೌರವಕ್ಕೆ ಚ್ಯುತಿ ತಂದ ಆರೋಪ ಹೊರಿಸಲಾಗಿದೆ.

ಯಾರು ಈ ಎಪ್ಸ್ಟೀನ್‌?:

ಎಪ್ಸ್ಟೀನ್‌ ಎಂಬಾತ ಅಮೆರಿಕದ ಫೈನಾನ್ಷಿಯರ್‌ ಆಗಿದ್ದು, ಆತನ ವಿರುದ್ಧ ಲೈಂಗಿಕ ಹಗರಣ ಆರೋಪವಿದೆ. 2019 ರಲ್ಲಿ ನ್ಯೂಯಾರ್ಕ್ ಜೈಲಿನ ಕೋಣೆಯಲ್ಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಆತನ ಲೈಂಗಿಕ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಕೋರ್ಟ್‌ ದಾಖಲೆಗಳು, ಸಾಕ್ಷ್ಯಗಳು ಮತ್ತು ಮೊಹರು ಮಾಡಿದ ದಾಖಲೆಗಳು ಈವರೆಗೂ ಬಹಿರಂಗವಾಗಿಲ್ಲ. ಹೀಗಾಗಿ ಇದರಲ್ಲಿನ ಅಂಶಗಳ ಬಗ್ಗೆ ಬಹಳ ಹಿಂದಿನಿಂದಲೂ ಊಹಾಪೋಹಗಳಿವೆ.

PREV
Read more Articles on

Latest Stories

ಬ್ರಿಟನ್‌ ಎಫ್‌-35 ರಿಪೇರಿ ಅಂತ್ಯ:ಇನ್ನೆರಡು ದಿನದಲ್ಲಿ ಟೇಕಾಫ್‌
ಪಾಕ್‌ ಅಣ್ವಸ್ತ್ರ ಗುಡ್ಡಕ್ಕೆ ಭಾರತ ಬಾಂಬ್‌ ದಾಳಿ ನಡೆಸಿದ್ದು ನಿಜ: ಉಪಗ್ರಹ ಸಾಕ್ಷ್ಯ
ಮರೆತಿದ್ದ ಪತ್ನಿ ಕರೆತರಲು22 ಬೆಂಗಾವಲು ಪಡೆ ಜತೆಬಂದ ಸಚಿವ ಚೌಹಾಣ್‌!