ಹೊಸದಾಗಿ 26 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಭಾರತ ಉದ್ದೇಶ : ಕಮ್ಮಿ ದರಕ್ಕೆ ಫ್ರಾನ್ಸ್ ಒಪ್ಪಿಗೆ

KannadaprabhaNewsNetwork |  
Published : Oct 01, 2024, 01:32 AM ISTUpdated : Oct 01, 2024, 04:54 AM IST
 ರಫೇಲ್‌ | Kannada Prabha

ಸಾರಾಂಶ

ಭಾರತವು 26 ಹೊಸ ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಫ್ರಾನ್ಸ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದು, ಹಲವಾರು ಸುತ್ತಿನ ಮಾತುಕತೆಗಳ ನಂತರ ಫ್ರಾನ್ಸ್ ಬೆಲೆ ಇಳಿಸಿದೆ. ಈ ಒಪ್ಪಂದವು ವರ್ಷಾಂತ್ಯದ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ನವದೆಹಲಿ: ಭಾರತ ಹೊಸದಾಗಿ 26 ರಫೇಲ್‌ ಯುದ್ಧವಿಮಾನಗಳ ಖರೀದಿಗೆ ಉದ್ದೇಶಿದ್ದು, ಹಲವಾರು ಸುತ್ತಿನ ಮಾತುಕತೆಗಳ ನಂತರ, ವಿಮಾನದ ಬೆಲೆಗಳನ್ನು ಫ್ರಾನ್ಸ್‌ ಇಳಿಸಿದೆ ಹಾಗೂ ಅಂತಿಮ ಬೆಲೆಯ ಪ್ರಸ್ತಾಪವನ್ನು ಭಾರತಕ್ಕೆ ಸಲ್ಲಿಸಿದೆ.

ಸೋಮವಾರ ಫ್ರಾನ್ಸ್‌ಗೆ ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರವಾಸ ಆರಂಭಿಸಿದ್ದು ಮಹತ್ವದ ರಕ್ಷಣಾ ಮಾತುಕತೆಯಲ್ಲಿ ತೊಡಗಿದ್ದಾರೆ. ಅದಕ್ಕೂ ಮುನ್ನ ಈ ಧನಾತ್ಮಕ ಬೆಳವಣಿಗೆ ನಡೆದಿದೆ.

 ಮೇ ತಿಂಗಳಲ್ಲಿ 50 ಸಾವಿರ ಕೋಟಿ ರು. ಮೊತ್ತದಲ್ಲಿ 26 ರಫೇಲ್‌ ಖರೀದಿಗೆ ಭಾರತ ಮಾತುಕತೆ ಆರಂಭಿಸಿತ್ತು. ಬಳಿಕ ಬೆಲೆಗೆ ಸಂಬಂಧಿಸಿದಂತೆ ಭಾರಿ ಚೌಕಾಶಿ ನಡೆದಿತ್ತು. ಕಠಿಣ ಮಾತುಕತೆಗಳ ನಂತರ ಫ್ರಾನ್ಸ್‌ ಗಮನಾರ್ಹವಾಗಿ ಬೆಲೆ ಕಡಿತ ಮಾಡಿದೆ. 

ವರ್ಷಾಂತ್ಯದಲ್ಲಿ ಒಪ್ಪಂದ ಏರ್ಪಡಲಿದೆ ಎಂದು ಮೂಲಗಳು ಹೇಳಿವೆ. ಆದರೆ ಎಷ್ಟು ಬೆಲೆಗೆ ವಿಮಾನ ಖರೀದಿಸಲಾಗುತ್ತದೆ? ಫ್ರಾನ್ಸ್ ಎಷ್ಟು ಕಡಿತ ಮಾಡಿದೆ ಎಂಬ ವಿವರ ಲಭ್ಯವಿಲ್ಲ.ಈ ರಫೇಲ್‌ ಯುದ್ಧವಿಮಾನಗಳನ್ನು ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆ ಹಾಗೂ ವಿವಿಧ ನೆಲೆಗಳಲ್ಲಿ ಮೇಲೆ ಇರಿಸಲಾಗುತ್ತದೆ. ಈ ಹಿಂದೆಯೂ ಭಾರತ 2016ರಲ್ಲಿ 36 ರಫೇಲ್‌ ಯುದ್ಧವಿಮಾನಗಳ ಖರೀದಿ ಒಪ್ಪಂದ ಮಾಡಿಕೊಂಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ