ದೇಶದ ಅತಿದೊಡ್ಡ ರಕ್ಷಣಾ ಖರೀದಿಗೆ ಸಂಪುಟದ ಸಮ್ಮತಿ

KannadaprabhaNewsNetwork |  
Published : Feb 13, 2026, 03:15 AM IST
rafael war plane

ಸಾರಾಂಶ

ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಭಾರತ ಭೇಟಿಗೆ ಕೆಲವೇ ದಿನಗಳು ಬಾಕಿಯಿರುವಾಗಲೇ, ಫ್ರೆಂಚ್‌ ನಿರ್ಮಿತ 114 ರಫೇಲ್‌ ಯುದ್ಧವಿಮಾನ ಮತ್ತು ಅಮೆರಿಕದಿಂದ 6 ಬೋಯಿಂಗ್‌ ಪಿ8-1ಐ ಕಣ್ಗಾವಲು ವಿಮಾನ ಖರೀದಿಸುವ 3.6 ಲಕ್ಷ ಕೋಟಿ ರು.ಗಳ ಬೃಹತ್‌ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ  ಅನುಮೋದನೆ ನೀಡಿದೆ. 

 ನವದೆಹಲಿ: ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಭಾರತ ಭೇಟಿಗೆ ಕೆಲವೇ ದಿನಗಳು ಬಾಕಿಯಿರುವಾಗಲೇ, ಫ್ರೆಂಚ್‌ ನಿರ್ಮಿತ 114 ರಫೇಲ್‌ ಯುದ್ಧವಿಮಾನ ಮತ್ತು ಅಮೆರಿಕದಿಂದ 6 ಬೋಯಿಂಗ್‌ ಪಿ8-1ಐ ಕಣ್ಗಾವಲು ವಿಮಾನ ಖರೀದಿಸುವ 3.6 ಲಕ್ಷ ಕೋಟಿ ರು.ಗಳ ಬೃಹತ್‌ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ. ಈ ಮೂಲಕ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಶಸ್ತ್ರಾಸ್ತ್ರ ಒಪ್ಪಂದಕ್ಕೆ ತಯಾರಿ ಆರಂಭಿಸಿದೆ.

ಮ್ಯಾಕ್ರನ್‌ ಫೆ.17ರಿಂದ 19ರವರೆಗೆ ಭಾರತಕ್ಕೆ ಭೇಟಿ

ಮ್ಯಾಕ್ರನ್‌ ಫೆ.17ರಿಂದ 19ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ.

ಭಾರತ ಈಗಾಗಲೇ 36 ರಫೇಲ್‌ ಜೆಟ್‌ಗಳನ್ನು ಹೊಂದಿದೆ. 63,000 ಕೋಟಿ ರು. ಒಪ್ಪಂದದಲ್ಲಿ, ನೌಕಾಪಡೆಗಾಗಿ 26 ರಫೇಲ್‌ಗಳನ್ನು ಆರ್ಡರ್‌ ಮಾಡಿದೆ. ಇದರ ಹೊರತಾಗಿಯೂ ವಾಯುಪಡೆಯ ಮಲ್ಟಿ ರೋಲ್‌ ಫೈಟರ್‌ ಏರ್‌ಕ್ರಾಫ್ಟ್‌ ಯೋಜನೆಯ ಭಾಗವಾಗಿ ಹೊಸ ಒಪ್ಪಂದ ನಡೆಯಲಿದೆ. ಇದು ಯಶಸ್ವಿಯಾದರೆ ಭಾರತವು ಫ್ರಾನ್ಸ್‌ ಹೊರತುಪಡಿಸಿ ಜಗತ್ತಿನ ಅತಿದೊಡ್ಡ ರಫೇಲ್‌ ಕಾರ್ಯನಿರ್ವಾಹಕ ದೇಶವಾಗಿ ಹೊರಹೊಮ್ಮಲಿದೆ. ಜತೆಗೆ, ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿ, ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಶಕ್ತಿ ತುಂಬಲಿದೆ.

114ರ ಪೈಕಿ 18 ವಿಮಾನಗಳನ್ನು ಮಾತ್ರವೇ ಹಾರಾಡುವ ಸ್ಥಿತಿಯಲ್ಲಿ

114ರ ಪೈಕಿ 18 ವಿಮಾನಗಳನ್ನು ಮಾತ್ರವೇ ಹಾರಾಡುವ ಸ್ಥಿತಿಯಲ್ಲಿ ಫ್ರಾನ್ಸ್‌ ಕಂಪನಿ ಭಾರತಕ್ಕೆ ಪೂರೈಸಲಿದೆ. ಉಳಿದ 98 ವಿಮಾನಗಳನ್ನು ಭಾರತದಲ್ಲೇ ನಿರ್ಮಾಣ ಮಾಡಲಾಗುವುದು. ಜೊತೆಗೆ ಇವುಗಳಿಗೆ ಶೇ.50ರಷ್ಟು ಮೇಕ್‌ ಇನ್‌ ಇಂಡಿಯಾ ಉತ್ಪನ್ನಗಳಲ್ಲೇ ಬಳಕೆ ಮಾಡಲಾಗುವುದು.

3.6 ಲಕ್ಷ ಕೋಟಿ ರು. ಖರೀದಿ ಒಪ್ಪಂದಲ್ಲಿ 114 ರಫೇಲ್‌ ಯುದ್ಧ ವಿಮಾನ ಮತ್ತು ಅಮೆರಿಕದಿಂದ 6 ಬೋಯಿಂಗ್‌ ಪಿ8-1ಐ ಕಣ್ಗಾವಲು ವಿಮಾನ ಖರೀದಿ ಕೂಡಾ ಸೇರಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾಗಾ ವಿರುದ್ಧ ಸಂಸತ್ತಲ್ಲಿ ಬಿಜೆಪಿಯ ಅನರ್ಹತೆ ಅಸ್ತ್ರ
7 ದಶಕಗಳ ಬಳಿಕಹೊಸ ಕಟ್ಟಡಕ್ಕೆ ಪ್ರಧಾನಿ ಕಚೇರಿ - ಇಂದು ‘ಸೇವಾ ತೀರ್ಥ’ ಉದ್ಘಾಟನೆ