ಶ್ರೀಮಂದಿರ ಪರಿಕ್ರಮ ಪ್ರಕಲ್ಪ ಲೋಕಾರ್ಪಣೆ: 800 ಕೋಟಿ ರು. ವೆಚ್ಚದಲ್ಲಿ ಸಿದ್ಧವಾಯ್ತು ಪುರಿ ಜಗನ್ನಾಥ ಕಾರಿಡಾರ್!

KannadaprabhaNewsNetwork |  
Published : Jan 18, 2024, 02:02 AM ISTUpdated : Jan 18, 2024, 11:23 AM IST
ಜಗನ್ನಾಥ ಮಂದಿರ | Kannada Prabha

ಸಾರಾಂಶ

ಕಾಶಿ ವಿಶ್ವನಾಥ ಕಾರಿಡಾರ್‌ ಮಾದರಿಯಲ್ಲಿ ಪ್ರಸಿದ್ಧ ಜಗನ್ನಾಥ ಮಂದಿರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ 800 ಕೋಟಿ ರು. ವೆಚ್ಚದ ಶ್ರೀಮಂದಿರ ಪರಿಕ್ರಮ ಪ್ರಕಲ್ಪ ಪುರಿ ಜಗನ್ನಾಥ ಕಾರಿಡಾರ್‌ ಅನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬುಧವಾರ ಉದ್ಘಾಟಿಸಿದರು.

ಪುರಿ: ಕಾಶಿ ವಿಶ್ವನಾಥ ಕಾರಿಡಾರ್‌ ಮಾದರಿಯಲ್ಲಿ ಪ್ರಸಿದ್ಧ ಜಗನ್ನಾಥ ಮಂದಿರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ 800 ಕೋಟಿ ರು. ವೆಚ್ಚದ ಶ್ರೀಮಂದಿರ ಪರಿಕ್ರಮ ಪ್ರಕಲ್ಪ ಪುರಿ ಜಗನ್ನಾಥ ಕಾರಿಡಾರ್‌ ಅನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬುಧವಾರ ಉದ್ಘಾಟಿಸಿದರು.

ಈ ವೇಳೆ ಮುಖ್ಯಮಂತ್ರಿಗೆ ಪುರಿಯ ಗಜಪತಿ ವಂಶದ ಮಹಾರಾಜ ದಿವ್ಯಸಿಂಘ ದೇವ ಸಾಥ್‌ ನೀಡಿದರು. ನಂತರ ಮಹಾರಾಜರೊಂದಿಗೆ ಮೆರವಣಿಗೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಶ್ರೀಮಾರ್ಗದುದ್ದಕ್ಕೂ ಮೆರವಣಿಗೆಯಲ್ಲಿ ಸಾಗಿ ಜಗನ್ನಾಥ ಮಂದಿರ ತಲುಪಿದರು. 

ಅಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ ಜಗನ್ನಾಥನ ಅನುಗ್ರಹದಿಂದಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದೇನೆ ಎಂದು ತಿಳಿಸಿದರು. ಯೋಜನೆಯನ್ನು ಉದ್ಘಾಟಿಸುವ ಸಲುವಾಗಿ ನಗರವನ್ನು ಹೂವು, ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು.

 ಅಲ್ಲದೆ ಪ್ರಪಂಚದಾದ್ಯಂತ 90 ದೇಗುಲಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದರ ಸಲುವಾಗಿ ಒಡಿಶಾ ಸರ್ಕಾರ ಬುಧವಾರ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು.

ಏನಿದು ಪುರಿ ಕಾರಿಡಾರ್‌?
ಶ್ರೀಮಂದಿರ ಪರಿಕ್ರಮ ಪ್ರಕಲ್ಪ ಎಂದು ಕರೆಯಲಾಗುವ ಪುರಿ ಜಗನ್ನಾಥ ಅಭಿವೃದ್ಧಿ ಕಾರಿಡಾರ್‌ನ್ನು 800 ಕೋಟಿ ರು. ವೆಚ್ಚದಲ್ಲಿ ಮಾಡಲಾಗಿದೆ. ಇದರಲ್ಲಿ ಐತಿಹಾಸಿಕ ಪುರಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ.

ಪ್ರಮುಖವಾಗಿ ಜಗನ್ನಾಥ ಮಂದಿರವನ್ನು ಸಂಪರ್ಕಿಸುವ ರಸ್ತೆಯನ್ನು ಅಗಲಗೊಳಿಸಿ ಶ್ರೀಮಾರ್ಗ ಎಂದು ಹೆಸರಿಸಲಾಗಿದೆ. ಅಲ್ಲದೆ ಶ್ರೀಸೇತು ಎಂಬ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ.

ಜೊತೆಗೆ ದೇಗುಲಕ್ಕೆ ಭರುವ ಭಕ್ತಾದಿಗಳಿಗೆ ವಾಹನ ನಿಲ್ಲಿಸಲು ಜಗನ್ನಾಥ ಬಲ್ಲವ ಪಾರ್ಕಿಂಗ್‌ ನಿರ್ಮಿಸಲಾಗಿದೆ. ಇದರ ಜೊತೆಗೆ ಧಾರ್ಮಿಕ ಕೇಂದ್ರ, ಶೌಚಾಲಯ ವ್ಯವಸ್ಥೆ, ಲಗೇಜು ಕೊಠಡಿ, ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಲಾಗಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ