‘ಸಂಘಿ’ಗಳ ಬಗ್ಗೆ ರಜನಿ ಪುತ್ರಿ ಹೇಳಿಕೆ: ವಿವಾದ

KannadaprabhaNewsNetwork | Updated : Jan 30 2024, 08:24 AM IST

ಸಾರಾಂಶ

‘ಸಂಘಿ’ಗಳ (ಆರೆಸ್ಸೆಸ್‌) ಬಗ್ಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ‘ನನ್ನ ಮಗಳು ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ’ ಎಂದು ರಜನಿ ಸ್ಪಷ್ಟಪಡಿಸಿದ್ದಾರೆ.

ಚೆನ್ನೈ: ‘ಸಂಘಿ’ಗಳ (ಆರೆಸ್ಸೆಸ್‌) ಬಗ್ಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 

ಇದರ ಬೆನ್ನಲ್ಲೇ ‘ನನ್ನ ಮಗಳು ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ’ ಎಂದು ರಜನಿ ಸ್ಪಷ್ಟಪಡಿಸಿದ್ದಾರೆ.

‘ನನ್ನ ತಂದೆ ಆಧ್ಯಾತ್ಮಿಕ ವ್ಯಕ್ತಿ. ಅವರು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತಾರೆ. ಆದರೆ ನನ್ನ ತಂದೆಯನ್ನು ಏಕೆ ಆ ರೀತಿ (ಸಂಘಿ ಎಂಬಂತೆ) ಬಿಂಬಿಸುತ್ತೀರಿ’ ಎಂದು ತಮ್ಮ ಹೊಸ ಲಾಲ್‌ ಸಲಾಮ್‌ ಸಿನಿಮಾದ ಬಗ್ಗೆ ಮಾತನಾಡುವಾಗ ಐಶರ್ಯಾ ಹೇಳಿದ್ದರು. 

ಐಶ್ವರ್ಯ ಅವರ ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಅವರು ಸಂಘಿಗಳನ್ನು ಅವಮಾನಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು.

ಇದಕ್ಕೆ ರಜನಿ ಸ್ಪಷ್ಟನೆ ನೀಡಿ, ‘ಸಂಘಿ ಎಂಬ ಪದ ಕೆಟ್ಟ ಅರ್ಥ ಹೊಂದಿದೆ ಎಂಬಂತೆ ನನ್ನ ಮಗಳು ಐಶ್ವರ್ಯ ಮಾತನಾಡಿಲ್ಲ. ನನ್ನನ್ನು ಆಧ್ಯಾತ್ಮಿಕ ವ್ಯಕ್ತಿ ಎಂದಷ್ಟೇ ಹೇಳಿದ್ದಾಳೆ’ ಎಂದಿದ್ದಾರೆ.

Share this article