ಸ್ವದೇಶಿ ಸ್ಟೆಲ್ತ್‌ ಯುದ್ಧನೌಕೆ ತಾರಾಗಿರಿ ಸೇನೆಗೆ

KannadaprabhaNewsNetwork |  
Published : Apr 04, 2026, 01:45 AM IST
ತಾರಾಗಿರಿ | Kannada Prabha

ಸಾರಾಂಶ

ದೇಶದ ನೌಕಾಪಡೆಯ ಸಾಮರ್ಥ್ಯವೃದ್ಧಿಯ ಭಾಗವಾಗಿ ಐಎನ್‌ಎಸ್‌ ತಾರಾಗಿರಿ ದಾಳಿ ನೌಕೆಯನ್ನು ಶುಕ್ರವಾರ ಸೇನೆಗೆ ಸೇರಿಸಿಕೊಳ್ಳಲಾಗಿದೆ. ಇದು ಸ್ವದೇಶಿ ನಿರ್ಮಿತ ಸ್ಟೆಲ್ತ್‌ (ರಾಡಾರ್‌ ಕಣ್ಣಿಗೆ ಬೀಳದ) ಯುದ್ಧನೌಕೆಯಾಗಿದೆ.

ಶೇ.75ರಷ್ಟು ಭಾಗಗಳು ಭಾರತದಲ್ಲೇ ಉತ್ಪಾದನೆ

ಶತ್ರು ಗಾಳಿಯಲ್ಲಿ ಬಂದರೂ, ನೀರಡಿ ಬಂದರೂ ನಾಶ

ಆಪತ್ತಿನಲ್ಲಿ ನೆರವು, ರಕ್ಷಣೆಗೂ ಈ ನೌಕೆ ಬಳಕೆ ಸಾಧ್ಯ

ವಿಶಾಖಪಟ್ಟಣಂ: ದೇಶದ ನೌಕಾಪಡೆಯ ಸಾಮರ್ಥ್ಯವೃದ್ಧಿಯ ಭಾಗವಾಗಿ ಐಎನ್‌ಎಸ್‌ ತಾರಾಗಿರಿ ದಾಳಿ ನೌಕೆಯನ್ನು ಶುಕ್ರವಾರ ಸೇನೆಗೆ ಸೇರಿಸಿಕೊಳ್ಳಲಾಗಿದೆ. ಇದು ಸ್ವದೇಶಿ ನಿರ್ಮಿತ ಸ್ಟೆಲ್ತ್‌ (ರಾಡಾರ್‌ ಕಣ್ಣಿಗೆ ಬೀಳದ) ಯುದ್ಧನೌಕೆಯಾಗಿದೆ.

ತಾರಾಗಿರಿಯನ್ನು ಮುಂಬೈನ ಮಡಗಾಂವ್‌ ಡಾಕ್‌ ಲಿ. ನಿರ್ಮಿಸಿದ್ದು, ಇದರ ಶೇ.75ರಷ್ಟು ಭಾಗಗಳು ಭಾರತದಲ್ಲೇ ನಿರ್ಮಿತವಾದವು. ಇದರಲ್ಲಿ 200 ಎಂಎಸ್‌ಎಂಇಗಳು ಭಾಗವಹಿಸಿದ್ದು ವಿಶೇಷ.

ಈ ನೌಕೆಯ ಸ್ಟೆಲ್ತ್‌ ಸಾಮರ್ಥ್ಯವು ಶತ್ರುಗಳ ಕಣ್ಣಿಂದ ನೌಕೆಯನ್ನು ರಕ್ಷಿಸುವುದರ ಜತೆಗೆ ಘಾತುಕ ದಾಳಿಗಳಿಗೆ ಸಹಕಾರಿಯಾಗಿದೆ. ಇದರಲ್ಲಿ ಶತ್ರುನೌಕೆಗಳನ್ನು ಪತ್ತೆ ಮಾಡುವ ಅತ್ಯಾಧುನಿಕ ರಾಡಾರ್‌ ವ್ಯವಸ್ಥೆ, ಸೋನಾರ್‌ ಮತ್ತು ನೌಕೆಯಿಂದ ಗಾಳಿಯಲ್ಲಿನ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಬಲ್ಲ ಬ್ರಹ್ಮೋಸ್‌, ಬರಾಕ್‌ 8 ಕ್ಷಿಪಣಿ, ವರುಣಾಸ್ತ್ರ, ಎಂಎಫ್‌- ಸ್ಟಾರ್‌ ರಾಡಾರ್‌, ಆರ್‌ಬಿಯು-6000 ರಾಕೆಟ್ ಲಾಂಚರ್‌ಗಳನ್ನು ಇದು ಒಳಗೊಂಡಿದೆ. ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಜಲಾಂತರ್ಗಾಮಿ ನೌಕೆಗಳನ್ನೂ ಇದು ಗುರುತಿಸಿ ಹೊಡೆಯಬಲ್ಲದು. ಡೀಸೆಲ್‌ ಹಾಗೂ ಅನಿಲ ಚಾಲಿತವಾಗಿರುವ ಕಾರಣ ಅತ್ಯಂತ ವೇಗವಾದ ಕಾರ್ಯಾಚರಣೆ ಸಾಧ್ಯ.

ಅನ್ಯ ಬಳಕೆ:

ದಾಳಿಯ ಹೊರತಾಗಿ ತಾರಾಗಿರಿಯನ್ನು ಮಾನವೀಯ ನೆರವನ್ನು ಅನ್ಯ ದೇಶಗಳಿಗೆ ರವಾನಿಸಲು, ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ರಕ್ಷಣೆಗೂ ಬಳಸಬಹುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ವಾಹನಗಳಿಗೆ ಇ20: ಶೇ.53ರಷ್ಟುಎನ್‌ಡಿಎ ಮತದಾರರ ವಿರೋಧ
ಮಹಾರಾಷ್ಟ್ರ: ಡಿಟರ್ಜೆಂಟ್‌ ಪುಡಿ ಬಳಸಿ 23 ಲಕ್ಷ ಲೀ. ಕೃತಕ ಹಾಲು ಮಾರಾಟ!