ಅಯೋಧ್ಯೆಗೆ ಆಗಮಿಸಿದ ಗಣ್ಯರಿಗೆ ದೀಪ, ಮಾಲೆ ಪುಸ್ತಕ, ಲಡ್ಡು ಉಡುಗೊರೆ

KannadaprabhaNewsNetwork |  
Published : Jan 23, 2024, 01:49 AM ISTUpdated : Jan 23, 2024, 09:07 AM IST
Ayodhya Ram Lalla Darshan

ಸಾರಾಂಶ

ಅಯೋಧ್ಯೆ ರಾಮಮಂದಿರಕ್ಕೆ ಸಾಕ್ಷಿಯಾಗಿದ್ದ ಆಹ್ವಾನಿತರಿಗೆ ಟ್ರಸ್ಟ್‌ ವತಿಯಿಂದ ತಲಾ ನಾಲ್ಕು ಲಡ್ಡು, ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಪ್ರಸಾದ ವಿತರಿಸಲಾಗಿದೆ. ಜೊತೆಗೆ ಅಯೋಧ್ಯೆ ಕ್ಷೇತ್ರ ಮಹಿಮೆಯುಳ್ಳ ಪುಸ್ತಕ, ರುದ್ರಾಕ್ಷಿ ಮಾಲೆ ಮತ್ತು ಲೋಹದ ದೀಪವನ್ನು ಉಡುಗೊರೆ ನೀಡಲಾಗಿದೆ.

ಅಯೋಧ್ಯೆ: ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯಲಲ್ಲಿ ಪಾಲ್ಗೊಳ್ಳಲು ಆಗಮಿಸಿದ ಆಹ್ವಾನಿತ ಗಣ್ಯರಿಗೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ದೀಪ, ಮಾಲೆ, ಕ್ಷೇತ್ರ ಮಹಿಮೆ ಕುರಿತ ಪುಸ್ತಕ ಮತ್ತು ಲಡ್ಡು ಉಡುಗೊರೆ ನೀಡಿದೆ.

ಈ ಉಡುಗೊರೆಗಳನ್ನು ರಾಮಮಂದಿರ ಮತ್ತು ಬಾಲರಾಮನ ಚಿತ್ರವಿರುವ ಕೈಚೀಲವೊಂದರಲ್ಲಿ ಪ್ಯಾಕ್‌ ಮಾಡಿ ಕೊಡಲಾಗಿದೆ.

ಇದರಲ್ಲಿ ಅಯೋಧ್ಯಾ ಕ್ಷೇತ್ರ ಮಹಿಮೆಯ ವಿವರ ಕುರಿತ ಪುಸ್ತಕ, ಲೋಹದಿಂದ ಮಾಡಿದ ದೀಪಸ್ತಂಭಗಳು, ಶ್ರೀರಾಮನ ಹೆಸರುಳ್ಳ ತಲೆಯ ರಕ್ಷಾ ಕವಚವನ್ನು ನೀಡಲಾಗಿದೆ.

ಅಲ್ಲದೆ ಉತ್ತರ ಪ್ರದೇಶ ಪ್ರವಾಸೋದ್ಯಮದ ಚಿಹ್ನೆಯಿರುವ ಚೀಲದಲ್ಲಿ ತುಳಸಿ ಮಾಲೆಯನ್ನು ಕೊಡಲಾಗಿದೆ.

ಇದರ ಜೊತೆಗೆ ಪ್ರಸಾದವಾಗಿ ನಾಲ್ಕು ಲಡ್ಡು, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಚಿಪ್ಸ್‌ಗಳನ್ನು ನೀಡಲಾಗಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ