ಕೋಲ್ಕತಾ: ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ರಾಮೇಂದು ಸಿಂಹ ರಾಯ್ ಅವರು ಅಯೋಧ್ಯೆಯ ರಾಮಮಂದಿರವನ್ನು ‘ಅಪವಿತ್ರ’ ಮತ್ತು ‘ಶೋ ಪೀಸ್’ ಎಂದು ಕರೆದಿದ್ದು, ಭಾರೀ ವಿವಾದ ಹುಟ್ಟುಹಾಕಿದ್ದಾರೆ.
ಅಲ್ಲಿ (ಅಯೋಧ್ಯೆ) ಕೇವಲ ‘ಶೋ ಪೀಸ್’ ಮಾತ್ರ ನಿರ್ಮಿಸಲಾಗಿದೆ’ ಎಂದು ಹೇಳಿದ್ದಾರೆ, ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ‘ರಾಯ್ ಅವರ ಮಾತುಗಳು ಭಗವಾನ್ ರಾಮನ ಬಗ್ಗೆ ಟಿಎಂಸಿ ನಾಯಕತ್ವ ಹೊಂದಿರುವ ಗೌರವವನ್ನು ತೋರಿಸುತ್ತದೆ’ ಎಂದು ಟೀಕಿಸಿದ್ದಾರೆ.