ಭಾರತವನ್ನಾಳಿದ್ದ ಬ್ರಿಟಿಷರ ಕಂಪನಿಯೇ ಖರೀದಿಸಿದ್ದ ರತನ್‌ ಟಾಟಾ! ಕೋರಸ್‌ ಖರೀದಿ ಟಾಟಾ ಪಾಲಿಗೆ ದೊಡ್ಡ ಸಾಧನೆ

Published : Oct 11, 2024, 08:29 AM IST
Ratan Tata

ಸಾರಾಂಶ

ದಶಕಗಳ ಹಿಂದೆಯೇ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದ ರತನ್‌ ಟಾಟಾ, ದೇಶೀಯವಾಗಿ ಉದ್ಯಮಗಳನ್ನು ವಿಸ್ತರಿಸುವ ಜೊತೆಗೆ ಜಾಗತಿಕವಾಗಿಯೂ ಟಾಟಾ ಗ್ರೂಪ್‌ ಹೆಜ್ಜೆ ಗುರುತು ಹೆಚ್ಚಿಸಲು ಹಲವು ಖ್ಯಾತನಾಮ ಕಂಪನಿಗಳನ್ನು ಖರೀದಿಸಿದ್ದರು.

 ದಶಕಗಳ ಹಿಂದೆಯೇ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದ ರತನ್‌ ಟಾಟಾ, ದೇಶೀಯವಾಗಿ ಉದ್ಯಮಗಳನ್ನು ವಿಸ್ತರಿಸುವ ಜೊತೆಗೆ ಜಾಗತಿಕವಾಗಿಯೂ ಟಾಟಾ ಗ್ರೂಪ್‌ ಹೆಜ್ಜೆ ಗುರುತು ಹೆಚ್ಚಿಸಲು ಹಲವು ಖ್ಯಾತನಾಮ ಕಂಪನಿಗಳನ್ನು ಖರೀದಿಸಿದ್ದರು. ಈ ಪೈಕಿ ಒಂದೊಮ್ಮೆ ಭಾರತವನ್ನು ಆಳಿದ್ದ ಬ್ರಿಟಿಷರಿಗೆ ಸೇರಿದ ಕೋರಸ್‌ ಸ್ಟೀಲ್‌ ಕೂಡಾ ಒಂದು.

ಯುರೋಪ್‌ನಲ್ಲೇ ಎರಡನೇ ಅತ್ಯಂತ ದೊಡ್ಡ ಉಕ್ಕು ಉತ್ಪಾದನಾ ಕಂಪನಿಯಾಗಿದ್ದ ಕೋರಸ್‌ ಅನ್ನು 2002ರಲ್ಲಿ ಟಾಟಾ ಸ್ಟೀಲ್‌ ಖರೀದಿ ಮಾಡಿತು. ಇದಕ್ಕಾಗಿ ಕಂಪನಿ 55000 ಕೋಟಿ ರು. ಪಾವತಿ ಮಾಡಿತ್ತು.

ಕೋರಸ್‌ ಖರೀದಿ ಟಾಟಾ ಪಾಲಿಗೆ ದೊಡ್ಡ ಸಾಧನೆ ಜೊತೆಗೆ ದೇಶದ ಪಾಲಿಗೂ ಹೆಮ್ಮೆ ತಂದಿತ್ತು. ಆರಂಭಿಕ ಕೆಲ ವರ್ಷಗಳಲ್ಲಿ ಈ ಖರೀದಿ ಫಲ ಕೊಟ್ಟರೂ ಬಳಿಕ ದುಬಾರಿ ಎನ್ನಿಸಿತು. ಯುರೋಪ್‌ ದೇಶಗಳಲ್ಲಿ ಉಕ್ಕಿಗೆ ಬೇಡಿಕೆ ಕುಸಿತ, ವಿದೇಶಗಳಿಂದ ಅಗ್ಗದ ದರದ ಉಕ್ಕು ಆಮದು, ನಿರ್ವಹಣಾ ವೆಚ್ಚ ಹೆಚ್ಚಳ ಕಾರಣ, ಟಾಟಾ ಗ್ರೂಪ್‌ ಪಾಲಿಗೆ ಕೋರಸ್ ಬಿಳಿಯಾನೆ ಆಯಿತು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ