ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಅವರು ಅತತ ಎರಡನೇ ವರ್ಷವೂ ವಿಶ್ವದ ಅಗ್ರ ಕೇಂದ್ರೀಯ ಬ್ಯಾಂಕರ್ ಆಗಿ ಹೊರಹೊಮ್ಮಿದ್ದಾರೆ ಎಂದು ಅಮೆರಿಕ ಮೂಲದ ಗ್ಲೋಬಲ್ ಫಿನಾನ್ಸ್ ನಿಯತಕಾಲಿಕ ವರದಿ ಮಾಡಿದೆ.
ಎ+ ರೇಟಿಂಗ್ ಪಡೆದ ಮೂವರು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳಲ್ಲಿ ದಾಸ್ ಒಬ್ಬರಾಗಿದ್ದಾರೆ. ಈ ಬಗ್ಗೆ ಆರ್‌ಬಿಐ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ.==
1 ವರ್ಷದಲ್ಲಿ 7.3 ಕೋಟಿ ಇಂಟರ್ನೆಟ್, 7.8 ಕೋಟಿ ಬ್ರ್ಯಾಂಡ್‌ಬ್ಯಾಂಡ್ ಸಂಪರ್ಕನವದೆಹಲಿ: ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ 7.3 ಕೋಟಿ ಜನರು ಹೊಸ ಇಂಟರ್ನೆಟ್ ಸಂಪರ್ಕ ಪಡೆದಿದ್ದರೆ, 7.8 ಕೋಟಿ ಜನರು ಹೊಸದಾಗಿ ಬ್ರ್ಯಾಡ್‌ಬ್ಯಾಂಡ್ ಸಂಪರ್ಕ ಪಡೆದಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. 2023ರ ಮಾರ್ಚ್‌ನಲ್ಲಿ 88.1 ಕೋಟಿ ಇದ್ದ ಇಂಟರ್ನೆಟ್ ಚಂದಾದಾರರ ಸಂಖ್ಯೆ 2024ರ ಮಾರ್ಚ್‌ಗೆ 95.4 ಕೋಟಿಗೆ ಏರಿದೆ. ಅದೇ ರೀತಿ 2023ರ ಮಾರ್ಚ್‌ಗೆ 84.6 ಕೋಟಿ ಇದ್ದ ಬ್ರ್ಯಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ 92.4 ಕೋಟಿಗೆ ಏರಿದೆ. ಅದೇ ರೀತಿ ಟೆಲಿಫೋನ್ ಚಂದಾದಾರರ ಸಂಖ್ಯೆ 1 ವರ್ಷದಲ್ಲಿ117.2 ಕೋಟಿಯಿಂದ 119.9 ಕೋಟಿಗೆ ಏರಿದೆ.==
ದೇಶವ್ಯಾಪಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹ 10 ವರ್ಷದ ಸರಾಸರಿಗಿಂತ ಶೇ.14 ಹೆಚ್ಚುನವದೆಹಲಿ: ದೇಶವ್ಯಾಪಿ ಉತ್ತರ ಮುಂಗಾರು ಮಳೆ ಸುರಿದ ಪರಿಣಾಮ ದೇಶಾದ್ಯಂತ ಇರುವ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಭಾರೀ ಏರಿಕೆ ಕಂಡಿದೆ. ಸದ್ಯ 150 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವು ಕಳೆದ ದಶಕದ ಸರಾಸರಿ ಗಿಂತ ಶೇ.14ರಷ್ಟು ಹೆಚ್ಚಾಗಿದೆ. ಹಾಲಿ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದ ಶೇ.69ರಷ್ಟು ನೀರಿನ ಸಂಗ್ರಹವಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ.==
ಕೋವಿಶೀಲ್ಡ್ ತಯಾರಿಸಿದ್ದ ಸೀರಂನಿಂದ ವರ್ಷಾಂತ್ಯಕ್ಕೆ ಮಂಕಿಪಾಕ್ಸ್‌ಗೂ ಲಸಿಕೆ ಸಿದ್ಧನವದೆಹಲಿ: ವಿಶ್ವದ ಅತಿ ದೊಡ್ಡ ಲಸಿಕಾ ಉತ್ಪಾದನಾ ಕಂಪನಿ ಪುಣೆ ಮೂಲದ ಸೀರಂ ಇನ್ಸ್‌ಟಿಟ್ಯೂಟ್ ಇದೇ ವರ್ಷಾಂತ್ಯಕ್ಕೆ ಮಂಕಿ ಪಾಕ್ಸ್ ವೈರಸ್‌ಗೂ ಸಹ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಸೀರಂನ ಅದಾರ್ ಪೂನಾವಾಲಾ, ‘ಈಗಾಗಲೇ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದ್ದು, ಮಂಕಿಪಾಕ್ಸ್‌ಗೆ ಲಸಿಕೆಯನ್ನು ತಯಾರಿಸಲು ಸೀರಂ ಸಕಲ ಸಿದ್ಧತೆ ನಡೆಸುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ. ಈ ಮೂಲಕ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಇದೇ ಸಂಸ್ಥೆ ಕೋವಿಡ್ ಸೋಂಕಿಗೆ ಕೋವಿಶೀಲ್ಡ್ ಲಸಿಕೆ ತಯಾರಿಸಿತ್ತು. ಅದು ಹಲವು ದೇಶಗಳಿಗೆ ರಫ್ತಾಗಿತ್ತು.==
ಮಂಕಿಪಾಕ್ಸ್ ಕೋವಿಡ್ ರೀತಿ ಅಲ್ಲ, ಪ್ರಸರಣ ತಡೆ ಸಾಧ್ಯ: ಡಬ್ಲ್ಯುಎಚ್‌ಒ ಭರವಸೆನವದೆಹಲಿ: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಮಂಕಿಪಾಕ್ಸ್ ಸಾಂಕ್ರಾಮಿಕದ ಹೊಸ ತಳಿ ಕೋವಿಡ್ ಸೋಂಕಿನಂತಲ್ಲ. ಅದರ ಪ್ರಸರಣ ತಡೆಯಬಹುದು ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲುಗೆ ಹೇಳಿದ್ದಾರೆ. ನಾವು ಒಗ್ಗಟ್ಟಾಗಿ ಮಂಕಿಪಾಕ್ಸ್ ನಿಯಂತ್ರಿಸಬಹುದು. ಆದ್ದರಿಂದ ನಾವು ಜಾಗತಿಕವಾಗಿ ಮಂಕಿಪಾಕ್ಸ್ ನಿಯಂತ್ರಣಕ್ಕೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕೆ? ಅಥವಾ ನಾವು ಮತ್ತೊಂದು ಸುತ್ತಿನ ನಿರ್ಲಕ್ಷ್ಯವನ್ನು ಮಾಡಬೇಕೆ? ಈಗ ಮತ್ತು ಮುಂಬರುವ ವರ್ಷಗಳಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವ ವಿಚಾರವು ಯುರೋಪ್ ಮತ್ತು ಜಗತ್ತಿನ ನಿರ್ಣಾಯಕ ಪರೀಕ್ಷೆ ಸಾಬೀತು ಪಡಿಸುತ್ತದೆ’ ಎಂದರು.