3 ದಿನಗಳ ಬದಲು ಇನ್ನು ಶೀಘ್ರ 3 ತಾಸಲ್ಲಿ ಚೆಕ್‌ ನಗದೀಕರಣ : ಭಾರತೀಯ ರಿಸರ್ವ್ ಬ್ಯಾಂಕ್‌

KannadaprabhaNewsNetwork |  
Published : Aug 09, 2024, 02:05 AM ISTUpdated : Aug 09, 2024, 04:46 AM IST
ಆರ್‌ಬಿಐ | Kannada Prabha

ಸಾರಾಂಶ

ಬ್ಯಾಂಕ್‌ಗಳಲ್ಲಿ ಚೆಕ್‌ ಕ್ಲಿಯರೆನ್ಸ್‌ ಅವಧಿಯನ್ನು ಹಾಲಿ ಇರುವ 2-3 ದಿನಗಳಿಂದ, ಕೆಲವೇ ಗಂಟೆಗಳಿಗೆ ಇಳಿಸುವ ಮಹತ್ವದ ನಿರ್ಧಾರವೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಕೈಗೊಂಡಿದೆ. ಈ ನೀತಿ ಶೀಘ್ರವೇ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪ್ರಕಟಿಸಿದೆ.

ಮುಂಬೈ: ಬ್ಯಾಂಕ್‌ಗಳಲ್ಲಿ ಚೆಕ್‌ ಕ್ಲಿಯರೆನ್ಸ್‌ ಅವಧಿಯನ್ನು ಹಾಲಿ ಇರುವ 2-3 ದಿನಗಳಿಂದ, ಕೆಲವೇ ಗಂಟೆಗಳಿಗೆ ಇಳಿಸುವ ಮಹತ್ವದ ನಿರ್ಧಾರವೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಕೈಗೊಂಡಿದೆ. ಈ ನೀತಿ ಶೀಘ್ರವೇ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪ್ರಕಟಿಸಿದೆ.

ಗುರುವಾರ ಇಲ್ಲಿ ದ್ವೈಮಾಸಿಕ ಸಾಲ ನೀತಿ ಪ್ರಕಟಿಸಿ ಮಾತನಾಡಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌, ‘ಹೊಸ ವ್ಯವಸ್ಥೆಯಡಿ ಕ್ಲಿಯರಿಂಗ್‌ಗೆ ಅಗತ್ಯವಿರುವ ಸಮಯವನ್ನು ಪ್ರಸ್ತುತ 2-3 ದಿನಗಳ ಅವಧಿಯಿಂದ ಕೆಲವೇ ಗಂಟೆಗಳವರೆಗೆ ಕಡಿತಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಸಕ್ತ ಬ್ಯಾಂಕ್‌ಗಳಲ್ಲಿ ಗ್ರಾಹಕರು ಸಲ್ಲಿಸಿದ ಚೆಕ್‌ ಕ್ಲಿಯರೆನ್ಸ್‌ಗೆ ಸಿಟಿಎಸ್‌ (ಚೆಕ್‌ ಟ್ರಂಕೇಷನ್‌ ಸಿಸ್ಟಮ್‌) ಬಳಸಲಾಗುತ್ತಿದೆ. ಇದರಿಂದ ಚೆಕ್‌ನಲ್ಲಿದ್ದ ನಮೂದಿಸಿದ ಹಣ ಗ್ರಾಹಕರ ಖಾತೆ ಸೇರಲು 2- 3 ದಿನ ಬೇಕಾಗುತ್ತಿದೆ. ಆದರೆ ಹೊಸ ವ್ಯವಸ್ಥೆಯಡಿ ಚೆಕ್‌ನಲ್ಲಿ ಎಲ್ಲಾ ಮಾಹಿತಿಯನ್ನು ಕಚೇರಿಯ ಅವಧಿಯಲ್ಲೇ ಸ್ಕ್ಯಾನ್‌ ಮಾಡಿ, ಪಾವತಿ ಮಾಡಬೇಕಿರುವ ಬ್ಯಾಂಕ್‌ಗೆ ಆನ್‌ಲೈನ್‌ ಮೂಲಕ ರವಾನಿಸಲಾಗುತ್ತದೆ. ಅತ್ತ ಕಡೆಯಿಂದ ಮಾಹಿತಿ ಖಚಿತವಾಗುತ್ತಲೇ ಗ್ರಾಹಕನ ಬ್ಯಾಂಕ್‌ ಖಾತೆಗೆ ತಕ್ಷಣವೇ ಹಣ ಜಮೆ ಆಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಕೆಲವೇ ಗಂಟೆಗಳ ಒಳಗೆ ಸಾಧ್ಯವಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!
ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ