2 ದಶಕ ವಿಪಕ್ಷದಲ್ಲಿ ಇರಲು ಸಿದ್ಧ, ಬಾಬ್ರಿ ಕಟ್ಟುವವರ ಜೊತೆ ಮೈತ್ರಿ ಇಲ್ಲ : ಶಾ

KannadaprabhaNewsNetwork |  
Published : Apr 11, 2026, 01:45 AM IST
Amith Shah

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಅಯೋಧ್ಯೆ ರೀತಿ ಬಾಬರಿ ಮಸೀದಿ ಕಟ್ಟಲು ಮುಂದಾಗಿರುವ ಶಾಸಕ ಹುಮಾಯುನ್‌ ಕಬೀರ್‌, ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರಸ್ಕರಿಸಿದ್ದಾರೆ.  

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಅಯೋಧ್ಯೆ ರೀತಿ ಬಾಬರಿ ಮಸೀದಿ ಕಟ್ಟಲು ಮುಂದಾಗಿರುವ ಶಾಸಕ ಹುಮಾಯುನ್‌ ಕಬೀರ್‌, ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರಸ್ಕರಿಸಿದ್ದಾರೆ.

20 ವರ್ಷ ವಿಪಕ್ಷದಲ್ಲಾದರೂ ಕುಳಿತುಕೊಳ್ಳುತ್ತೇವೆ

 ನಾವು 20 ವರ್ಷ ವಿಪಕ್ಷದಲ್ಲಾದರೂ ಕುಳಿತುಕೊಳ್ಳುತ್ತೇವೆ. ಆದರೆ ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಿಸುವ ಬಗ್ಗೆ ಮಾತನಾಡುವವರ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ.

ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಲು  ಒಪ್ಪಂದ ಎಂದು ಬಿಂಬಿಸುವ ವಿಡಿಯೋ

ಮುಸ್ಲಿಂ ಮತಗಳನ್ನು ಒಡೆದು, ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಬೀರ್‌ ಬಿಜೆಪಿ ಜತೆ 1,000 ಕೋಟಿ ರು. ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಬಿಂಬಿಸುವ ವಿಡಿಯೋವನ್ನು ಟಿಎಂಸಿ ಬಿಡುಗಡೆ ಮಾಡಿತ್ತು.

 ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾ, ‘ಮಮತಾ ಬ್ಯಾನರ್ಜಿ ಸಾಮರ್ಥ್ಯಗಳ ಬಗ್ಗೆ ನಿಮಗೆ ತಿಳಿದಿಲ್ಲ. ಅವರು ಇಂತಹ 2,000 ವೀಡಿಯೊಗಳನ್ನು ಬೇಕಾದರೂ ಮಾಡುತ್ತಾರೆ. ಕಬೀರ್ ಮತ್ತು ಬಿಜೆಪಿ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳಿದ್ದಂತೆ. ನಾವು ಎಂದಿಗೂ ಒಟ್ಟಾಗಲು ಸಾಧ್ಯವಿಲ್ಲ.

ಬಾಬರಿ ಮಸೀದಿ ಕಟ್ಟುವವರ ಜೊತೆ ಕುಳಿತುಕೊಳ್ಳುವುದಕ್ಕಿಂತ 20 ವರ್ಷ ವಿಪಕ್ಷದಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತೇವೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕುಂಭ ಬೆಡಗಿ ಮೊನಾಲಿಸಾ ಅಪ್ರಾಪ್ತೆ : ಪತಿಯ ವಿರುದ್ಧ ಪೋಕ್ಸೋ ಕೇಸ್‌ ದಾಖಲು
ಕ್ಷೇತ್ರ ಮರುವಿಂಗಡಣೆ ವಿರುದ್ಧ ವಿಪಕ್ಷ ಜಂಟಿ ಹೋರಾಟ : ಖರ್ಗೆ